ಯೋಗ ಗುರು ಬಾಬಾ ರಾಮದೇವ್ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ.
ಬಿಹಾರ್ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸಾಮಾಜಿಕ ಮತ್ತು ರಾಜಕೀಯವಾಗಿ ದೇಶಕ್ಕೆ ತುಂಬಾ ಮಹತ್ವದ ನಾಯಕರಾಗಿದ್ದಾರೆ. ಅವರು ಸದಾ ಆರೋಗ್ಯದಿಂದಿರಲಿ ಎಂದು ಹಾರೈಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಾಲು ಪತ್ನಿ ರಾಬ್ಡಿದೇವಿ, ಪತಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವುದರಿಂದ ಅವರಿಗೆ ಯೋಗ ವ್ಯಾಯಾಮಗಳನ್ನು ಮಾಡುವಂತೆ ಸಲಹೆ ನೀಡಲು ಬಾಬಾ ರಾಮದೇವ್ ಮನೆಗೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಆರಂಭದಲ್ಲಿ ಲಾಲು ಯಾದವ್, ಬಾಬಾ ರಾಮದೇವ್ ಸಂಬಂಧ ತುಂಬಾ ಹಳಸಿಹೋಗಿತ್ತು.
ಕಠಿಣ ಪರಿಶ್ರಮ ಪಟ್ಟು ಯಶಸ್ವಿನ ಶಿಖರವನ್ನೇರಿರುವ ಬಾಬಾ ರಾಮದೇವ್ಗೆ ಅನೇಕ ಶತ್ರುಗಳಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ಲಾಲು ಯಾದವ್ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.