Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಮೆರಿಕ ಮಹಿಳೆಯ ಮೇಲೆ ಹೋಟೆಲ್‌ನಲ್ಲಿ ನಾಲ್ವರಿಂದ ಗ್ಯಾಂಗ್‌ರೇಪ್

ಅಮೆರಿಕ ಮಹಿಳೆಯ ಮೇಲೆ ಹೋಟೆಲ್‌ನಲ್ಲಿ ನಾಲ್ವರಿಂದ ಗ್ಯಾಂಗ್‌ರೇಪ್
ನವದೆಹಲಿ , ಶನಿವಾರ, 3 ಡಿಸೆಂಬರ್ 2016 (14:13 IST)
ದೆಹಲಿಯ ಕನ್ಹಾಟ್ ಪ್ರದೇಶದಲ್ಲಿರುವ ಐಷಾರಾಮಿ ಪಂಚತಾರಾ ಹೋಟೆಲ್‌ನಲ್ಲಿ ಐವರು ಆರೋಪಿಗಳು ಗ್ಯಾಂಗ್‌ರೇಪ್ ಎಸಗಿದ್ದಾರೆ ಎಂದು ಅಮೆರಿಕ ಮೂಲದ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
 
ಟೂರಿಸ್ಟ್ ಗೈಡ್ ಸೇರಿದಂತೆ ಐವರು ಆರೋಪಿಗಳು ಅಮೆರಿಕ ಮೂಲದ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ ಎಂದು ಕನ್ಹಾಟ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
 
ಕಳೆದ ಮಾರ್ಚ್ ತಿಂಗಳಲ್ಲಿ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಆಗಮಿಸಿದ್ದ ಮಹಿಳೆ, ಕನ್ಹಾಟ್ ಪ್ರದೇಶದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಹೋಟೆಲ್ ಅಧಿಕಾರಿಗಳ ಸಲಹೆ ಪಡೆದು ಟೂರಿಸ್ಟ್ ಗೈಡ್‌ನನ್ನು ನೇಮಿಸಿಕೊಂಡಿದ್ದಳು ಎನ್ನಲಾಗಿದೆ.
 
ಟೂರಿಸ್ಟ್ ಗೈಡ್ ನಿನ್ನೆ ತನ್ನ ನಾಲ್ವರು ಗೆಳೆಯರೊಂದಿಗೆ ಹೋಟೆಲ್‌ನ ಕೋಣೆಗೆ ಬಂದು ರೂಟ್ ಪ್ಲ್ಯಾನ್ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದನು. ನಂತರ ಎಲ್ಲರು ಹೋಟೆಲ್‌ನ ಕೋಣೆಯಲ್ಲಿ ಮದ್ಯ ಸೇವಿಸಿದರು. ತದನಂತರ ಗೈಡ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಇತರರು ಗ್ಯಾಂಗ್‌ರೇಪ್ ಎಸಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ಘಟನೆಯಿಂದ ಆಘಾತಗೊಂಡ ಮಹಿಳೆ ಕೂಡಲೇ ಭಾರತವನ್ನು ತೊರೆದು ಅಮೆರಿಕಕ್ಕೆ ತೆರಳಿದ್ದಾಳೆ. ಎನ್‌ಜಿಓ ನೀಡಿದ ಸಲಹೆ ನೇರೆಗೆ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾಳೆ. ಶೀಘ್ರದಲ್ಲಿಯೇ ಭಾರತಕ್ಕೆ ಮರಳಿ ಪೊಲೀಸರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸುವುದಾಗಿ ತಿಳಿಸಿದ್ದಾಳೆ.

\ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿ ಬಿಜೆಪಿ ಪ್ರತಿಭಟನೆ: ಸಿಎಂ ಕಿಡಿ