ಕೋಕಾ ಕೋಲಾ ಮತ್ತು ಪೆಪ್ಸಿಕೊ ಕಂಪನಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವಂತೆ ಯೋಗ ಗುರು ಬಾಬಾ ರಾಮದೇವ್ ಮತ್ತು ಆರ್‌ಎಸ್ಎಸ್ ಸರ್ಕಾರಕ್ಕೆ ಒತ್ತಾಯಿಸುತ್ತಿವೆ ಎಂದು ವರದಿಯಾಗಿದೆ.
ತಮ್ಮ ಪತಂಜಲಿ ಸಂಸ್ಥೆಯ ಉತ್ಪಾದನೆಗಳ ಮೂಲಕ ವಿದೇಶಿ ಕಂಪನಿಗಳಿಗೆ ಪೈಪೋಟಿ ನೀಡುತ್ತಿರುವ ಯೋಗ ಗುರು ಬಾಬಾ ರಾಮದೇವ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರತಿನಿಧಿಗಳು ಜಾಸ್ತಿ ಸಕ್ಕರೆ ಅಂಶನ್ನು ಹೊಂದಿರುವ ತಂಪು ಪಾನೀಯಗಳನ್ನು ಉತ್ಪಾದಿಸುವ ಕಂಪನಿಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುವಂತೆ ವಿತ್ತ ಮತ್ತು ಆರೋಗ್ಯ ಸಚಿವರಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ ದೇಶದಲ್ಲಿನ ವಯಸ್ಕರು ಮತ್ತು ಮಕ್ಕಳು ಸಂಸ್ಕರಿಸಿದ ಆಹಾರ ಮತ್ತು ಪಾನೀಯಗಳಿಂದ ದೊಡ್ಡ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕರ ಎಂಬುದು ಸಂಘದ ಪ್ರತಿನಿಧಿಗಳ ಮತ್ತು ರಾಮದೇವ್ ಅವರ ವಾದವಾಗಿದೆ.
ಕಳೆದ ವರ್ಷ, ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ್ ಸುಬ್ರಹ್ಮಣ್ಯನ್ ಪಾನೀಯಗಳು, ತಂಬಾಕು ಮತ್ತು ಐಷಾರಾಮಿ ಕಾರುಗಳ ಮೇಲೆ 40% ' ಪಾಪದ ತೆರಿಗೆ ' (ಸಿನ್ ಟ್ಯಾಕ್ಸ್) ಹೇರುವಂತೆ ಆಗ್ರಹಿಸಿದ್ದರು (ಈ ದರ ಸೂಚಿತ ಜಿಎಸ್‌ಟಿ ದರ 17-18 % ಕ್ಕಿಂತ ಸುಮಾರು ಎರಡು ಪಟ್ಟು) .
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ