ಪ್ರಧಾನಿ ಮೋದಿ ಅವರ ರೇಡಿಯೋ ಭಾಷಣ 'ಮನ್ ಕೀ ಬಾತ್' ಇನ್ನು ಮುಂದೆ ಪ್ರಾದೇಶಿಕ ಭಾಷೆಯಲ್ಲಿ ಕೂಡ ಪ್ರಸಾರವಾಗಲಿದೆ. ಮೂಲ ಹಿಂದಿ ಭಾಷಣ ಭಾನುವಾರ ಮುಂಜಾನೆ 11 ಗಂಟೆಗೆ ಪ್ರಸಾರವಾಗುತ್ತದೆ. ಇನ್ನು ಮೇಲೆ ಇದರ ಜೊತೆಗೆ ಏಕಕಾಲದಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಸಹ ಮೋದಿ ಭಾಷಣ ಪ್ರಸಾರವಾಗಲಿದೆ.
ರಾಜ್ಯಗಳ ನಡುವಿನ ಭಾಷಾ ಅಡೆತಡೆಗಳನ್ನು ದಾಟಿ ಹೊರಬಂದು ದೇಶದ ಮೂಲೆ ಮೂಲೆಯಲ್ಲಿ ಪ್ರಧಾನಿ ಸಂದೇಶ ಉತ್ತಮ ರೀತಿಯಲ್ಲಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಈ ನಡೆಯನ್ನಿಡಲಾಗುತ್ತಿದೆ.
ಮೂಲಗಳ ಪ್ರಕಾರ, ಪ್ರಧಾನಿ ಕಚೇರಿ ಈಗಾಗಲೇ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಈ ಕುರಿತು ಮುಂದುವರಿಯಲು ಸೂಚಿಸಿದ್ದು, ಯೋಜನೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಆಲ್ ಇಂಡಿಯಾ ರೇಡಿಯೋ (ಎಐಆರ್) ಗೆ ನಿರ್ದೇಶಿಸಲಾಗಿದೆ,
ದಕ್ಷಿಣ ಭಾರತದ ಜನರು ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಈ ಸಂವಹನ ಅಂತರವನ್ನು ನಿವಾರಿಸಲು ಮೂಲ ಹಿಂದಿ ಭಾಷಣವನ್ನು ಭಾಷಾಂತರಿಸಿ ಪ್ರಾದೇಶಿಕ ಭಾಷೆಯಲ್ಲಿ ಪ್ರಸಾರ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ