Publish Date: Mon, 29 Jul 2019 (10:55 IST)
Updated Date: Mon, 29 Jul 2019 (10:56 IST)
ನವದೆಹಲಿ: ಲೋಕಸಭೆ ಉಪ ಸ್ಪೀಕರ್ ರಮಾದೇವಿ ವಿರುದ್ಧ ಸಂಸತ್ತಿನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಸ್ ಪಿ ಸಂಸದ ಅಜಂ ಖಾನ್ ಇಂದು ಕ್ಷಮೆ ಯಾಚಿಸುವ ಸಾಧ್ಯತೆಯಿದೆ.
ರಮಾದೇವಿಯವರನ್ನು ಉದ್ದೇಶಿಸಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಾಗಿ ಆಕ್ಷೇಪಾರ್ಹವಾಗಿ ಅಜಂ ಖಾನ್ ಮಾತನಾಡಿದ್ದರು. ಇದಕ್ಕೆ ಎಲ್ಲಾ ಮಹಿಳಾ ಸಂಸದೆಯರೂ ಪಕ್ಷಬೇಧ ಮರೆತು ಪ್ರತಿಭಟನೆ ಮಾಡಿದ್ದರು.
ಅಜಂ ಖಾನ್ ಆರಂಭದಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿದರೂ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಂದು ಅಜಂಖಾನ್ ಕ್ಷಮೆ ಕೇಳುವ ಸಾಧ್ಯತೆಯಿದೆ.