Select Your Language

Notifications

webdunia
webdunia
webdunia
webdunia

ರಾಮಮಂದಿರ ನಿರ್ಮಾಣಕ್ಕಾಗಿ ವರ್ಷಾನುಗಟ್ಟಲೆ ಹೋರಾಡಿ ಜಯ ಪಡೆದು ಏನು ಪ್ರಯೋಜನವಾಯ್ತು

Ayodhya Ramamandir
ಅಯೋಧ್ಯೆ: ರಾಮಮಂದಿರ ನಿರ್ಮಾಣವಾಗಬೇಕು ಎಂದು ಅದೆಷ್ಟೋ ಹೋರಾಟಗಾರರು ವರ್ಷಗಟ್ಟಲೆ ಹೋರಾಡಿ ಕೊನೆಗೆ ಕೋರ್ಟ್ ನಲ್ಲಿ ಜಯ ಸಿಕ್ಕಾಗಿ ರಾಮನಿಗೆ ನ್ಯಾಯವೊದಗಿಸಿದೆವು ಎಂದು ಅದೆಷ್ಟೋ ಮಂದಿ ಹೆಮ್ಮೆಪಟ್ಟಿದ್ದೆವು. ಆದರೆ ಅಯೋಧ್ಯೆ ರಾಮಮಂದಿರದಲ್ಲಿ ಈಗ ಬಯಲಿಗೆ ಬಂದಿರುವ ಚಂದಾಚೋರಿ ಪ್ರಕರಣಗಳ ವಿವರ ಕೇಳುತ್ತಿದ್ದರೆ ಅಷ್ಟು ವರ್ಷಗಳ ಹೋರಾಟಕ್ಕೆ ಏನು ಫಲ ಎಂದು ಬೇಸರಿಸುವಂತಾಗಿದೆ.

ಅಯೋಧ್ಯೆ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ತಿಳಿದ ತಕ್ಷಣ ಎಷ್ಟೋ ಮಂದಿ ದೇಣಿಗೆ ನೀಡಿದ್ದಾರೆ. ದೇಣಿಗೆ ಹಣದ ರೂಪದಲ್ಲಿ, ಚಿನ್ನದ ರೂಪದಲ್ಲಿ ಹರಿದುಬಂದಿದೆ. ಮೂಲಗಳ ಪ್ರಕಾರ ಒಂದು ದಿನಕ್ಕೆ 18 ರಿಂದ 24 ಲಕ್ಷ ರೂ.ಗಳಷ್ಟು ದೇಣಿಗೆ ಬರುತ್ತಿತ್ತಂತೆ! ಆದರೆ ಖದೀಮರು ಪ್ರತಿನಿತ್ಯ 6 ರಿಂದ 8 ಲಕ್ಷ ರೂ. ಗುಳುಂ ಮಾಡುತ್ತಿದ್ದರಂತೆ.

ಕೇವಲ ಹಣ ಮಾತ್ರವಲ್ಲ, ರಾಮಮಂದಿರಕ್ಕೆ ದೇಣಿಗೆಯಾಗಿ ಬಂದ ಚಿನ್ನವನ್ನೂ ಕರಗಿಸಿ ಮಾರಾಟ ಮಾಡಿರುವ ಶಂಕೆಯಿದೆ. ಬರುತ್ತಿದ್ದ ಕಾಣಿಕೆಗೂ ಜಮೆ ಆಗುತ್ತಿದ್ದ ಮೊತ್ತಕ್ಕೂ ಭಾರೀ ವ್ಯತ್ಯಾಸವಿದೆ. ಚೋರಿಯಾದ ಹಣ ಎಲ್ಲೆಲ್ಲಿ ಜಮೆ ಆಗಿರಬಹುದು ಎಂದೂ ಇನ್ನೂ ಸ್ಪಷ್ಟವಾಗಿಲ್ಲ. ಎಸ್ಐಟಿ ತನಿಖೆಯಲ್ಲಿ ಈ ಎಲ್ಲಾ ಅಂಶಗಳು ಬೆಳಕಿಗೆ ಬಂದಿವೆ. ಇದೀಗ ಹಣಕಾಸಿನ ಹರಿವಿನ ಬಗ್ಗೆ ತನಿಖೆ ನಡೆಸಲು ಇಡಿ ಎಂಟ್ರಿಯಾಗುವ ಸಾಧ್ಯತೆಯಿದೆ.

ಆದರೆ ಜನರಿಗೆ ಬೇಸರವಾಗುತ್ತಿರುವುದು ಇದೊಂದೇ ಕಾರಣಕ್ಕೆ. ಅಯೋಧ್ಯೆಯಲ್ಲಿ ರಾಮಮಂದಿರವಾಗುತ್ತದೆ ಎಂದಾಗ ಇಡೀ ದೇಶವೇ ಸಂಭ್ರಮಿಸಿತ್ತು. ಅಯೋಧ್ಯೆಗೆ ರಾಮ ಮರಳಿ ಬಂದ ಎಂದು ಹಿಂದೂ ಆಸ್ತಿಕರು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದ್ದರು. ಇದಕ್ಕಾಗಿ ಎಷ್ಟೋ ಕರಸೇವಕರು ಪ್ರಾಣತ್ಯಾಗ ಮಾಡಿದ್ದರು. ಆದರೆ ಈಗ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಿ ಎರಡು ವರ್ಷಗಳೇ ಇಷ್ಟೊಂದು ಅವ್ಯವಹಾರಗಳು ಬಯಲಾಗಿರುವುದು ನಿಜಕ್ಕೂ ವಿಪರ್ಯಾಸ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶದ ದೇವಸ್ಥಾನದಲ್ಲಿ ಅನ್ಯಕೋಮಿನ ಜೋಡಿಯ ಅಸಭ್ಯ ವರ್ತನೆ: ಕೊನೆಗೆ ಏನಾಯ್ತು ನೋಡಿ video