Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬರೇಲಿ : ಹುಡುಗಿಯನ್ನು ಆಟೋರಿಕ್ಷಾ ಚಾಲಕನೊಬ್ಬ ಅಪಹರಿಸಿ ಮಾನಭಂಗ ಎಸಗಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ.
ಸಂತ್ರಸ್ತೆಯ ಕುಟುಂಬದವರು ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲಿಗೆ ಆರೋಪಿ ಪ್ರತಿದಿನ ಬರುತ್ತಿದ್ದ. ಹೀಗಾಗಿ ಸಂತ್ರಸ್ತೆಯನ್ನು ಆಟೋ ರಿಕ್ಷಾದಲ್ಲಿ ದಿನಸಿ ವಸ್ತುಗಳನ್ನು ತರಲು ಮಾರುಕಟ್ಟೆಗೆ ಕಳುಹಿಸಿದ್ದಾರೆ. ಆಗ ಚಾಲಕ ಸಂತ್ರಸ್ತೆಯನ್ನು ಅಪಹರಿಸಿ ಮಾನಭಂಗ ಎಸಗಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಆದರೆ ಸಂತ್ರಸ್ತೆ ಈ ಬಗ್ಗೆ ಮನೆಯವರಿಗೆ ತಿಳಿಸಿದ ಕಾರಣ ಚಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.