ನವದೆಹಲಿ: ಡೇರಾ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ಘೋಷಿಸುತ್ತಿದ್ದಂತೆ ಅವರನ್ನು ಜೈಲಿಗೆ ಕರೆದುಕೊಂಡು ಹೋಗುವ ಮೊದಲು ತಪ್ಪಿಸಿಕೊಳ್ಳಲು ಸಂಚು ನಡೆದಿತ್ತಾ?!
ಆತನ ಭದ್ರತಾ ಪಡೆಗಳ ನಡತೆ ಈ ಸಂಶಯವನ್ನು ಬಲವಾಗಿಸಿದೆ. ಬಾಬಾ ರಹೀಂಗೆ ಝೆಡ್ ಪ್ಲಸ್ ಭದ್ರತೆ ನೀಡುತ್ತಿದ್ದ ಅಧಿಕಾರಿಗಳು ಆತನನ್ನು ಜೈಲಿಗೆ ಕರೆದುಕೊಂಡುವ ಮೊದಲು ಅನುಯಾಯಿಗಳ ಗುಂಪಿನೊಳಗೆ ತೂರಲು ಪ್ರಯತ್ನಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಒಂದು ವೇಳೆ ಅನುಯಾಯಿಗಳ ನಡುವೆ ಸಿಲುಕಿಕೊಂಡಿದ್ದರೆ, ಆತನನ್ನು ಬಂಧಿಸುವುದು ಪೊಲೀಸರಿಗೆ ಕಷ್ಟವಾಗುತ್ತಿತ್ತು. ಆದರೆ ಇದರ ಸುಳಿವು ಅರಿತ ಪೊಲೀಸರು ಮತ್ತು ಅರೆ ಸೇನಾ ಪಡೆಗಳು ಆತನನ್ನು ವಶಕ್ಕೆ ಪಡೆದುಕೊಳ್ಳಲು ಯಶಸ್ವಿಯಾದರು. ಈ ಸಂಬಂಧ ಬಾಬಾ ಭದ್ರತಾ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.