Select Your Language

Notifications

webdunia
webdunia
webdunia
webdunia

ಹಾಸ್ಟೇಲ್‌ನಲ್ಲಿ ನಮಾಜ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

MOB Attack

Sampriya

ಅಹಮದಾಬಾದ್ , ಭಾನುವಾರ, 17 ಮಾರ್ಚ್ 2024 (12:46 IST)
Photo Courtesy X
ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾಲಯದ  ಹಾಸ್ಟೇಲ್‌ನಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುವ ವೇಳೆ  ಜನರ ಗುಂಪೊಂದು ಹಲ್ಲೆ ಮಾಡಿದ್ದು, ಘಟನೆಯಲ್ಲಿ ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 
 
ಹಾಸ್ಟೆಲ್‌ನಲ್ಲಿ ತಡರಾತ್ರಿ ನಡೆದ ಜಗಳದಲ್ಲಿ ಗುಜರಾತ್ ವಿಶ್ವವಿದ್ಯಾಲಯದ ಐವರು ವಿದೇಶಿ ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿದ್ದಾರೆ, ಕ್ಯಾಂಪಸ್‌ನಲ್ಲಿ ನಮಾಜ್ ಮಾಡುವ ಅಭ್ಯಾಸದ ಬಗ್ಗೆ ಉದ್ವಿಗ್ನತೆ ಉಂಟಾಗಿದೆ ಎಂದು ವರದಿಯಾಗಿದೆ.
 
ವಿದೇಶಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೀಡಿಯೊಗಳ ಪ್ರಕಾರ ಕನಿಷ್ಠ ಐದು ವಾಹನಗಳಿಗೆ ಹಾನಿಯಾಗಿದೆ.
 
ಉಜ್ಬೇಕಿಸ್ತಾನ್, ಅಫ್ಘಾನಿಸ್ತಾನ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಿಂದ ಬಂದಿರುವ ವಿದ್ಯಾರ್ಥಿಗಳು ತಮ್ಮ ಕೊಠಡಿಗಳಲ್ಲಿ ನಮಾಜ್ ಮಾಡುತ್ತಿದ್ದಾಗ ಜನರ ಗುಂಪು ಇದನ್ನು ಪ್ರತಿಭಟಿಸಿ ಧಾರ್ಮಿಕ ಘೋಷಣೆಗಳನ್ನು ಕೂಗಿದೆ ಎಂದು ಆರೋಪಿಸಲಾಗಿದೆ. ಇದು ಎರಡು ಗುಂಪುಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಸ್ವಲ್ಪ ಸಮಯದ ನಂತರ ಜಗಳಕ್ಕೆ ಕಾರಣವಾಯಿತು.
 
ಎರಡು ಗುಂಪುಗಳ ಜನರು ಹೊಡೆದಾಡಿದರು, ಅದರಲ್ಲಿ ಐವರು ಗಾಯಗೊಂಡರು. ವಿದೇಶಿ ವಿದ್ಯಾರ್ಥಿಗಳು ವಾಸವಾಗಿರುವ ಗುಜರಾತ್ ವಿಶ್ವವಿದ್ಯಾಲಯದ ಎ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ.
 
ಅಹಮದಾಬಾದ್ ನಗರದ ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ನೀರಜ್‌ಕುಮಾರ್ ಬಡಗುಜಾರ್ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದಲ್ಲದೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಧು ಮೂಸೆವಾಲಾ ಪೋಷಕರಿಗೆ ಎರಡನೇ ಮಗು ಜನನ: ವರ್ಷದ ಹಿಂದೆ ಹತ್ಯೆಯಾಗಿದ್ದ ಪಂಜಾಬಿ ಗಾಯಕ