ನವದೆಹಲಿ: ಡೇರಾ ಸಚ್ಚಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ನಂತೆ ಸ್ವಯಂ ಘೋಷಿತ ದೇವಮಾನವ ಎಂದು ಜನರನ್ನು ಮರಳು ಮಾಡುತ್ತಿದ್ದ ಅಸ್ಸಾರಾಂ ಬಾಪು ಪ್ರಕರಣದ ಸತ್ಯಗಳು ಹೊರಬರುತ್ತಿವೆ.
ಡೇರಾ ಬಾಬಾನಂತೆ ಅಸ್ಸಾರಾಂ ಬಾಪು ಕೂಡಾ ಹಲವು ಅತ್ಯಾಚಾರ, ಅಕ್ರಮದಲ್ಲಿ ಭಾಗಿಯಾಗಿದ್ದ. ಈತ ಈಗ ಜೈಲಿನಲ್ಲಿದ್ದಾನೆ. ಆದರೆ ಆತನ ವಿರುದ್ಧ ದೂರು ನೀಡಿದವರು ಕೇಸು ಹಿಂಪಡೆಯಲು ಒತ್ತಡ ಎದುರಿಸುತ್ತಿದ್ದಾರೆಂಬುದು ಬೆಳಕಿಗೆ ಬಂದಿದೆ.
ಈತನ ವಿರುದ್ಧ ಸಾಕ್ಷಿ ಹೇಳಿದವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ, ಇನ್ನು ಮೂವರು ನಾಪತ್ತೆಯಾಗಿದ್ದಾರೆ. ಇದೀಗ ಉತ್ತರ ಪ್ರದೇಶ ಮೂಲದ ದೂರುದಾರ ಯುವತಿಯ ಕುಟುಂಬದ ಮೇಲೆ ತೀವ್ರ ಒತ್ತಡವಿದೆ.
ಬೇಕೆಂದೇ ಬಾಪು ಕಡೆಯ ವಕೀಲರು ಆರೋಗ್ಯದ ನೆಪವೊಡ್ಡಿ ಕೇಸು ಸುದೀರ್ಘ ಕಾಲಕ್ಕೆ ಎಳೆದಾಡುತ್ತಿದ್ದಾರೆ. ಇದರಿಂದ ನಮ್ಮಂತಹ ಬಡವರಿಗೆ ಕಷ್ಟವಾಗುತ್ತಿದೆ ಎಂದು ಯುವತಿಯ ಕುಟುಂಬದವರು ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಳಲು ತೋಡಿಕೊಂಡಿದ್ದಾರೆ. 2013 ರಲ್ಲಿ ಬಾಪು ಬಂಧನಕ್ಕೊಳಗಾಗಿದ್ದ. ಇದುವರೆಗೆ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿಲ್ಲ.