ರಾಂಚಿ : ಸರಿಯಾಗಿ ಸಂಬಳ ಕೊಡಲಿಲ್ಲವೆಂದು ಕಾಂಟ್ರಾಕ್ಟರ್ ಮಗಳನನ್ನೇ ಹಾರಿಸಿಕೊಂಡ ಹೋದ ಘಟನೆ ರಾಂಚಿಯಲ್ಲಿ ನಡೆದಿದೆ.
ಬೆಂಗಳೂರಿನ ಕನ್ನಹಳ್ಳಿಯಲ್ಲಿ ಮಾರ್ಬಲ್ ಕಾಂಟ್ರಾಕ್ಟರ್ ನೊಬ್ಬ ತನ್ನ ಜೊತೆಗೆ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ಚಂದ್ರಪಾಲ್ ಸಿಂಗ್ ಎಂಬಾತನಿಗೆ ಸರಿಯಾಗಿ ಸಂಬಳ ನೀಡದೆ ಸತಾಯಿಸುತ್ತಿದ್ದನಂತೆ. ಇದರಿಂದ ಬೇಸತ್ತ ಚಂದ್ರಪಾಲ್, ಕಾಂಟ್ರಾಕ್ಟರ್ ಪುತ್ರಿಯ ಜೊತೆ ಪ್ರೀತಿಯ ನಾಟಕವಾಡಿ ನಂತರ ಆಕೆಯನ್ನು ಓಡಿಸಿಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲದೇ ವಿಡಿಯೋವೊಂದನ್ನು ಕಾಂಟ್ರಾಕ್ಟರ್ಗೆ ಕಳುಹಿಸಿ ಹಣ ಕೊಡಗಿದಿದ್ದರೆ ಇದನ್ನು ಸಾಮಾಜಿಕ ಜಾಲತಾಣದಲ್ಲೂ ಶೇರ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ.
ಈ ಸಂಬಂಧ ಕಾಂಟ್ರಾಕ್ಟರ್ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಕರ್ನಾಟಕ ಪೊಲೀಸರು, ಚಂದ್ರಪಾಲ್ನನ್ನು ಜಾರ್ಖಂಡ್ನ ರಾಂಚಿಯಲ್ಲಿ ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.