Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಧ್ಯಪ್ರದೇಶ: ನಾಯಿಗಳ ಸ್ವಭಾವ ಅಪರಿಚಿತರನ್ನು ಕಂಡಾಗ ಬೊಗಳುವುದು. ಆದರೆ ಅದೇ ಸ್ವಭಾವದಿಂದ ಅದನ್ನು ಸಾಕಿದ ನಾಲ್ವರು ಮಹಿಳೆಯರ ಪಾಲಿಗೆ ಕುತ್ತಾಗಿದೆ.
ನಾಯಿ ನೆರೆಮನೆಯಾತನನ್ನು ನೋಡಿ ಬೊಗಳಿತ್ತು. ಇದೇ ಸಿಟ್ಟಿನಲ್ಲಿ ಆತ ನಾಯಿಗೆ ಕೋಲಿನಿಂದ ಚೆನ್ನಾಗಿ ಭಾರಿಸಿದ್ದ. ಆದರೆ ನಾಯಿಯನ್ನು ಸಾಕಿದ್ದ ಮಹಿಳೆಯರಿಗೆ ಆಕ್ರೋಶ ತರಿಸಿತ್ತು. ಈ ಸಂಬಂಧ ನೆರೆಮನೆಯಾತ ಮತ್ತು ಆತನ ಸ್ನೇಹಿತರು ಹಾಗೂ ಮಹಿಳೆಯರ ನಡುವೆ ಜೋರಾದ ವಾಗ್ವಾದ ನಡೆಯಿತು. ಕೊನೆಗೆ ಮಹಿಳೆಯರಿಗೂ ಆರೋಪಿಗಳು ಹೊಡೆದಿದ್ದರು.
ಬಳಿಕ ಪೊಲೀಸರು ಮಧ‍್ಯಪ್ರವೇಶಿಸಬೇಕಾಯಿತು. ಹಲ್ಲೆ ಮಾಡಿದ್ದಲ್ಲದೆ, ಅಶ್ಲೀಲ ಶಬ್ಧಗಳನ್ನು ಬಳಸಿ ಆರೋಪಿಗಳು ನಿಂದಿಸಿದ್ದರು. ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.