ಚಂಡೀಗಢ : ಮೊಹಾಲಿಯ ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಪ್ರಕರಣ ಬೆಳಕಿಗೆ ಬಂದ ಬಳಿಕ ವಿದ್ಯಾರ್ಥಿನಿಯರು ಹಾಸ್ಟೆಲ್ನಲ್ಲಿ ವಾಶ್ ರೂಂ ಬಳಸೋದಕ್ಕೂ ಹೆದರುತ್ತಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣವು ವ್ಯಾಪಕ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಚಂಗೀಗಢ ವಿಶ್ವವಿದ್ಯಾಲಯವನ್ನು 5 ದಿನ ಬಂದ್ ಮಾಡಲಾಗಿದೆ.
ಸೆ.24ರವರೆಗೆ ವಿವಿಯನ್ನು ಬಂದ್ ಮಾಡಲಾಗಿದೆ. ಆದರೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ವಿದ್ಯಾರ್ಥಿನಿಯರು ಭಯಭೀತರಾಗಿದ್ದು, ಹಾಸ್ಟೆಲ್ ತೊರೆದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇನ್ನು ಇರುವ ವಿದ್ಯಾರ್ಥಿನಿಯರಂತು ಸ್ನಾನದ ಕೊಠಡಿಗಳನ್ನು ಬಳಸೋದಕ್ಕೆ ಹೆದರುತ್ತಿದ್ದಾರೆ.
ನಿನ್ನೆ ರಾತ್ರಿಯಷ್ಟೇ ವೀಡಿಯೋ ಲೀಕ್ ಮಾಡಿದ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದು, ಆಕೆಯಿಂದ ವೀಡಿಯೋ ಕಳಿಸಿಕೊಂಡಿದ್ದ ಬಾಯ್ಫ್ರೆಂಡ್ನನ್ನು ಬಂಧಿಸಲಾಗಿದೆ. ಆದರೂ ವಿದ್ಯಾರ್ಥಿಗಳ ಆಕ್ರೋಶ ಕಡಿಮೆಯಾಗಿಲ್ಲ.
ವೀಡಿಯೋ ಲೀಕ್ ಆದಾಗಿನಿಂದಲೂ ವಿದ್ಯಾರ್ಥಿನಿಯರು ವಾಶ್ರೂಂ ಗಳಲ್ಲಿ ಸ್ನಾನ ಮಾಡಲು ಹೆದರುತ್ತಿದ್ದಾರೆ. ಹಾಗಾಗಿ ಪೊಲೀಸರು ಹಾಸ್ಟೆಲ್ನಲ್ಲಿ ಹಿಡನ್ ಕ್ಯಾಮೆರಾಗಳಿವೆಯೇ ಎಂದು ಪರಿಶೀಲಿಸುತ್ತಿದ್ದಾರೆ.