ನವದೆಹಲಿ : ರಾಜ್ಯದಲ್ಲಿ ಉಪಚುನಾವಣೆ ಪ್ರಚಾರ ಚುರುಕುಗೊಂಡಿರುವ ಬೆನ್ನಿಗೇ ದೇಶದಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯವಾಗುವುದು ಖಚಿತಗೊಂಡಿದೆ.
ಮಾತ್ರವಲ್ಲದೆ, ಅದು ಆಡಳಿತಾರೂಢ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ವ್ಯಕ್ತವಾಗಿದೆ.
ಅಂದಹಾಗೆ ಹೊಸದೊಂದು ರಾಜಕೀಯ ಪಕ್ಷ ಹುಟ್ಟುಹಾಕಲು ಮುಂದಾಗಿರುವುದು ಮತ್ಯಾರೂ ಅಲ್ಲ.. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನದಿಂದ ಇಳಿದಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್. ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಯಾಗಲಿದೆ.
ಹೊಸ ಪಕ್ಷದ ಸ್ಥಾಪನೆ ಬಗ್ಗೆ ಕ್ಯಾಪ್ಟನ್ ಅಮರಿಂದ್ ಅವರ ಮಾಧ್ಯಮ ಸಲಹೆಗಾರರಾದ ರವೀನ್ ತುಕ್ರಾಲ್ ವಿಷಯ ಬಹಿರಂಗ ಪಡಿಸಿದ್ದಾರೆ. ಪಂಜಾಬ್ನಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿರುವ ಅವರು ಪಂಜಾಬ್ ಹಾಗೂ ಅಲ್ಲಿನ ಜನರ ಮತ್ತು ರೈತರ ಹಿತಕ್ಕಾಗಿ ಹೊಸ ಪಕ್ಷ ರಚಿಸಲಾಗುವುದು ಎಂದಿದ್ದಾರೆ.