ಬೆಂಗಳೂರು : ಸೇವೆಗೆ ಅವಕಾಶ ನೀಡುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ ವಿಶ್ವಾಸ ವ್ಯಕ್ತಪಡಿಸಿದರು. ಹಾನಗಲ್ಲ ಜನತೆ 5 ವರ್ಷದ ಅವಧಿಗೆ ಬಿಜೆಪಿಗೆ ಮತ ನೀಡಿದ್ದಾರೆ.
ಆದರೆ ದಿ.ಸಿ.ಎಂ.ಉದಾಸಿ ಅವರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಮತ್ತೆ ಚುನಾವಣೆ ಎದುರಾಗಿದ್ದು, ತಾಲೂಕಿನ ಪ್ರಜ್ಞಾವಂತ ಮತದಾರರು ಬಿಜೆಪಿಯನ್ನೇ ಆಯ್ಕೆ ಮಾಡಿ ಪೂರ್ಣಾವಧಿ
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ ಅಪಾರ ಕೊಡುಗೆ ನೀಡಿದೆ. ಅದರಲ್ಲಿ ಪ್ರಮುಖ ವಾಗಿ ಹಾವೇರಿಗೆ ಮೆಡಿಕಲ್ ಕಾಲೇಜು ಮಂಜೂರಾಗಿ ಕೆಲಸ ಪ್ರಗತಿಯಲ್ಲಿದೆ. ಕಾಮನ್ಮ್ಯಾನ್ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯವರಾಗಿದ್ದರಿಂದ ವಿಶೇಷ ಅನುದಾನ ನೀಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗುವ ಕನಸು ಕಂಡಿದ್ದಾರೆ. ಅವರ ಕನಸು ನನಸಾಗಲು ಹಾನಗಲ್ಲಿನಲ್ಲಿ ಬಿಜೆಪಿ ಗೆಲ್ಲಿಸಲೇಬೇಕು ಎಂದರು.
ಚುನಾವಣಾ ಪ್ರಚಾರ ಕಾರ್ಯದಲ್ಲಿ ಜನಸ್ತೋಮ ನೋಡಿದರೆ ನಾವು ಗೆದ್ದೇ ಬಿಟ್ಟಿದ್ದೇವೆ ಎನ್ನುವ ಕಾಂಗ್ರೆಸ್ ನಾಯಕರು ಇಲ್ಲೇ ಠಿಕಾಣಿ ಹೂಡಿದ್ದೇಕೆ. ಬೆಂಗಳೂರಿಗೆ ಹೋಗಬಹುದಿತ್ತಲ್ಲ ಎಂದು ಕಟುಕಿದ ಅವರು, ಇದೆಲ್ಲ ಕಾಂಗ್ರೆಸ್ಸಿಗರ ದುರಹಂಕಾರದ ಮಾತುಗಳು. ಮತದಾರರನ್ನು ಖರೀದಿಸಿದವರಂತೆ ಮಾತನಾಡುತ್ತಾರೆ.