Webdunia - Bharat's app for daily news and videos

Install App

ಕಾಪಾಡುವ ಕೈಗಳಿಂದಲೇ ವಂಚಿತಳಾದ ಅಪ್ರಾಪ್ತೆ; ಲೈಂಗಿಕ ಕಿರುಕುಳದಿಂದ ರಕ್ಷಿಸುವುದಾಗಿ ನಂಬಿಸಿ ಗ್ಯಾಂಗ್‌ರೇಪ್

Webdunia
ಬುಧವಾರ, 5 ಜುಲೈ 2023 (12:19 IST)
ಜೈಪುರ : ತಂದೆ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ ರಕ್ಷಿಸುವುದಾಗಿ ನಂಬಿಸಿ ಇಬ್ಬರು ವ್ಯಕ್ತಿಗಳು ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
 
ತಂದೆ ತನ್ನ 13 ವರ್ಷ ವಯಸ್ಸಿನ ಮಗಳಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇದರಿಂದ ರಕ್ಷಿಸುವುದಾಗಿ ಹೇಳಿದ ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕಿಯನ್ನು ತನ್ನ ಜೊತೆಯಲ್ಲಿ ಕರೆದೊಯ್ದಿದ್ದಲ್ಲದೇ ತನ್ನ ಸ್ನೇಹಿತನ ಜೊತೆಗೂಡಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಜೂನ್ 26ರಂದು ಆರೋಪಿ ತಂದೆ ತನ್ನ 13 ವರ್ಷದ ಮಗಳು ಜೂನ್ 22ರಿಂದ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಬಾಲಕಿಯನ್ನು ಪತ್ತೆಹಚ್ಚಿ ದುಷ್ಟರಿಂದ ರಕ್ಷಿಸಿದ್ದಾರೆ. 

ಘಟನೆಯ ಕುರಿತು ಬಾಲಕಿಯನ್ನು ವಿಚಾರಿಸಿದಾಗ ಆಕೆ, ತನ್ನ ತಾಯಿ ತೀರಿಕೊಂಡು 5 ವರ್ಷಗಳಾಗಿವೆ. ತಾಯಿಯ ನಿಧನದ ಬಳಿಕ ತಾನು ತಂದೆಯೊಂದಿಗೆ ವಾಸಮಾಡುತ್ತಿದ್ದು, ಸುಮಾರು ಒಂದೂವರೆ ವರ್ಷದಿಂದ ತಂದೆ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಈ ಕುರಿತು ಯಾರ ಬಳಿಯಾದರೂ ಮಾತನಾಡಿದರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದರು ಎಂದು ನಿಜಾಂಶ ಹೇಳಿದ್ದಾಳೆ. 

ಇಷ್ಟು ಮಾತ್ರವಲ್ಲದೇ 29 ವರ್ಷದ ವ್ಯಕ್ತಿಯೋರ್ವ ಬಾಲಕಿಗೆ ಪರಿಚಯವಾಗಿದ್ದು, ಜೂನ್ 22ರಂದು ತಂದೆಯಿಂದ ರಕ್ಷಿಸುವುದಾಗಿ ಹೇಳಿ ಅಪ್ರಾಪ್ತೆಯನ್ನು ಆತನ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ತನ್ನ ಸ್ನೇಹಿತನ ಜೊತೆ ಸೇರಿಕೊಂಡು ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅತ್ಯಾಚಾರವೆಸಗಿರುವುದು ಸಾಬೀತಾದ ಬಳಿಕ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನಮ್ಮವರೇ ಹೀಗೇ ಮಾಡಿದ್ರೆ ಏನ್‌ ಮಾಡೋದು

ಪಾಕ್‌ನಲ್ಲಿ ತೀವ್ರವಾದ ಆಹಾರ ಅಭದ್ರತೆ: 11ಮಿಲಿಯನ್ ಜನರ ಮೇಲೆ ಪರಿಣಾಮ ಸಾಧ್ಯತೆ

ದೇವೇಗೌಡರಿಗೆ 92ನೇ ಜನ್ಮದಿನದ ಸಂಭ್ರಮ: ಮೋದಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ಮುಂದಿನ ಸುದ್ದಿ