ಮಯನ್ಮಾರ್`ನಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿರುಚ ರೊಹಿಂಗ್ಯಾ ನಿರಾಶ್ರಿತರಿಗೆ ತರಬೇತಿ ನೀಡಲು ಭಾರತಕ್ಕೆ ಆಗಮಿಸಿದ್ದನ್ನೆಲಾದ ಬಾಂಗ್ಲಾದೇಶ ಮತ್ತು ಬ್ರಿಟೀಷ್ ಅಲ್ ಖೈದಾ ಆಪರೇಟಿವ್ ಸುಭಾನ್ ಹಕ್`ನನ್ನ ನಿನ್ನೆ ಸಂಜೆ ದೆಹಲಿ ವಿಶೇಷ ಪೊಲೀಸ್ ತಂಡ ಬಂಧಿಸಿರುವುದಾಗಿ ವರದಿಯಾಗಿದೆ.
ಶಸ್ತ್ರಾಸ್ತ್ರ ತರಬೇತಿ ಪಡೆದಿರುವ ಈತ ಈಗಾಗಲೇ ಹಲವರಿಗೆ ತರಬೇತಿ ನೀಡಿದ್ದಾನೆ. 4 ವರ್ಷಗಳಿಂದ ಭಯೋತ್ಪಾದಕ ಸಂಘಟನೆ ಜೊತೆ ಗುರುತಿಸಿಕೊಂಡಿರುವ ಈತ ಬಾಂಗ್ಲಾದೇಶದಲ್ಲೇ ಹಲವರಿಗೆ ತರಬೇತಿ ನೀಡಿರುವುದಾಗಿ ತಿಳಿದು ಬಂದಿದೆ. ಬಂಧಿತನಿಂದ ಪಿಸ್ತೂಲ್, 4 ಕಾಟ್ರಿಡ್ಜ್, ಲ್ಯಾಪ್ ಟಾಪ್, ವಿದೇಶಿ ಹಣವನ್ನ ವಶಪಡಿಸಿಕೊಳ್ಳಲಾಗಿದೆ. ಆಘಾತಕಾರಿ ಸಂಗತಿಯೆಂದರೆ ಈತ ಬಿಹಾರದ ಕಿಶಾನ್ ಗಂಜ್ ಪ್ರದೇಶದ ವೋಟರ್ ಐಡಿ ಸಹ ಹೊಂದಿದ್ದಾನೆ.
ಉಗ್ರ ಸುಭಾನ್ ಹಕ್`ನ ನಿಜವಾದ ಹೆಸರು ಶಮಿ ಉರ್ ರೆಹಮಾನ್. 12ನೇ ತರಗತಿವರೆಗೆ ಒದಿರುವ ಈತ ದಕ್ಷಿಣ ಆಫ್ರಿಕಾ ಮತ್ತು ಸಿರಿಯಾಗೆ ಭೇಟಿ ನೀಡಿ ಬಳಿಕ ಅಲ್ ಖೈದಾ ಸೇರಿದ್ದ. ಅಲ್ ಖೈದಾ ಉಗ್ರ ರೊಹಿಂಗ್ಯಾ ನಿರಾಶ್ರಿತರ ಜೊತೆ ಸಂಪರ್ಕದ ಮಾಹಿತಿ ಆಧಾರದ ಮೇಲೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್`ಗೆ ಅಫಿಡವಿಟ್ ಸಲ್ಲಿಸಿ ಭದ್ರತೆಯ ಅಪಾಯದ ಬಗ್ಗೆ ತಿಳಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ