Air India Plane Crash: ಊಟದ ತಟ್ಟೆ ಟೇಬಲ್ ಮೇಲೆ ಹಾಗೆಯೇ ಇತ್ತು.. ವಿಮಾನ ದುರಂತದ ಕರಾಳತೆ

Krishnaveni K
ಗುರುವಾರ, 12 ಜೂನ್ 2025 (18:14 IST)
Photo Credit: X
ಅಹಮ್ಮದಾಬಾದ್: ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ನಡೆದ ವಿಮಾನ ದುರಂತದ ತೀವ್ರತೆಗೆ ಮೆಡಿಕಲ್ ಕಾಲೇಜು ಕ್ಯಾಂಟೀನ್ ನ ಈ ದೃಶ್ಯಗಳೇ ಸಾಕ್ಷಿಯಾಗಿದೆ. ಊಟದ ಟೇಬಲ್ ಮೇಲೆ ಅರ್ಧ ತಿಂದ ಊಟದ ತಟ್ಟೆಗಳು ಹಾಗೆಯೇ ಇದೆ. ಇದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.

ಟೇಕ್ ಆಫ್ ಆದ ಐದೇ ನಿಮಿಷದಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಮೊದಲು ಮರಕ್ಕೆ ಢಿಕ್ಕಿ ಹೊಡೆದಿದ್ದು ಬಳಿಕ ಎದುರಿಗಿದ್ದ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ಹೊಡೆದಿದೆ. ಹಾಸ್ಟೆಲ್ ನ ಮೇಲ್ಭಾಗವನ್ನು ಸೀಳಿ ವಿಮಾನ ಪತನವಾಗಿದೆ.

ಹಾಸ್ಟೆಲ್ ನ ಮೇಲ್ಭಾಗದಲ್ಲಿ ಊಟದ ಹಾಲ್ ಇತ್ತು. ಪತನವಾಗುವ ಸಂದರ್ಭದಲ್ಲಿ ಸುಮಾರು 1.30 ಆಗಿದ್ದರಿಂದ ಆಗಷ್ಟೇ ವಿದ್ಯಾರ್ಥಿಗಳು ಊಟಕ್ಕಾಗಿ ಬಂದಿದ್ದರು. ಟೇಬಲ್ ಮೇಲೆ ತಟ್ಟೆ ಇಟ್ಟುಕೊಂಡು ಇನ್ನೇನು ಊಟ ಮಾಡಬೇಕೆನ್ನುವಾಗ ವಿಮಾನ ಅಪ್ಪಳಿಸಿದೆ.

ಇದರಿಂದ ತಿನ್ನುತ್ತಿದ್ದ ಊಟದ ತಟ್ಟೆಯೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದೆ. ಘಟನೆಯಲ್ಲಿ ಪ್ರಯಾಣಿಕರಷ್ಟೇ ಅಲ್ಲದೆ ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸಾವಿನ ನಿಖರ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತವನ್ನು ಹೂತು ಹಾಕ್ತೇವೆ: ಪಾಕಿಸ್ತಾನ ಯಡವಟ್ಟು ಸಚಿವ ಖ್ವಾಜಾ ಆಸಿಫ್ ಹೇಳಿಕೆ

Karnataka Weather: ಶಕ್ತಿ ಸೈಕ್ಲೋನ್ ಇಫೆಕ್ಟ್, ಈ ದಿನದವರೆಗೂ ರಾಜ್ಯದಲ್ಲಿ ಮಳೆ ಸೂಚನೆ

ನನಗೇ ಅಧಿಕಾರ ಇದ್ದಿದ್ದರೆ ಮೆಟ್ರೋಗೆ ಬಸವಣ್ಣನ ಹೆಸರಿಡುತ್ತಿದ್ದೆ: ಸಿದ್ದರಾಮಯ್ಯ

ಬೆಂಗಳೂರಿನವರಿಗೆ ಕುರಿ, ಕೋಳಿ ಎಂದೆಲ್ಲಾ ಪ್ರಶ್ನೆ ಕೇಳಬೇಡಿ: ಡಿಕೆ ಶಿವಕುಮಾರ್ ಖಡಕ್ ಸೂಚನೆ

ಜಾತಿ ಗಣತಿಯಲ್ಲಿ ಗೊಂದಲವೇ ಹೆಚ್ಚಾಗಿದೆ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments