Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಪಿಎಸ್-ಓಪಿಎಸ್ ಬಣಗಳಿಗೆ ಎರೆಡೆಲೆ ಚಿಹ್ನೆ: ಟಿಟಿಬಿ ದಿನಕರನ್‌ಗೆ ಮುಖಭಂಗ

ಇಪಿಎಸ್-ಓಪಿಎಸ್ ಬಣಗಳಿಗೆ ಎರೆಡೆಲೆ ಚಿಹ್ನೆ: ಟಿಟಿಬಿ ದಿನಕರನ್‌ಗೆ ಮುಖಭಂಗ
ನವದೆಹಲಿ , ಗುರುವಾರ, 23 ನವೆಂಬರ್ 2017 (16:54 IST)
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ನೇತೃತ್ವದ ಎಐಎಡಿಎಂಕೆ ಪಕ್ಷಕ್ಕೆ 'ಎರಡು ಎಲೆಗಳು' ಚಿಹ್ನೆಯನ್ನು ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಚುನಾವಣೆ ಆಯೋಗದ ತೀರ್ಪು ವಿ.ಕೆ. ಶಶಿಕಲಾಳ ಸೋದರಳಿಯ ಟಿಟಿವಿ ಧನಕರನ್ ಅವರಿಗೆ ಮುಖಭಂಗವಾಗಿದೆ ಎಂದು ಹೇಳಲಾಗುತ್ತಿದೆ. 
 
ಇಪಿಎಸ್ ಮತ್ತು ಓಪಿಎಸ್ ಬಣ ಹಾಗೂ ಶಶಿಕಲಾ ಬಣದ ನಡುವೆ ಹಲವು ತಿಂಗಳುಗಳ ಕಾಲ ನಡೆದ ರಾಜಕೀಯ ಮತ್ತು ಕಾನೂನು ಹೋರಾಟದ ನಂತರ ಇದೀಗ ಕೇಂದ್ರ ಚುನಾವಣೆ ಆಯೋಗ ತೀರ್ಪು ನೀಡಿದೆ ಎಂದು ಮೂಲಗಳು ತಿಳಿಸಿವೆ. 
 
ಈ ಹಿಂದೆ ಕೂಡಾ ಜಯಲಲಿತಾ ಎಂಜಿಆರ್ ವಿಧುವೆ ಪತ್ನಿಯಾದ ಜಾನಕಿಯಿಂದ ಪಕ್ಷದ ಎರಡೆಲೆ ಚಿಹ್ನೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದನ್ನು ಸ್ಮರಿಸಬಹುದು. 
 
ವಿ.ಕೆ. ಶಶಿಕಲಾ ಪರವಾಗಿ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಿರುವ ದಿನಕರನ್ ಬಣವು ಈಗಾಗಲೇ ಒತ್ತಡದಲ್ಲಿದೆ.  ನವೆಂಬರ್ 9 ರಂದು ಶಶಿಕಲಾ ಮತ್ತು ದಿನಕರನ್ ಕುಟುಂಬಕ್ಕೆ ಸೇರಿದ ಸುಮಾರು 200 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು.
 
ಶಶಿಕಲಾ ಮತ್ತು ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಗದ್ದುಗೆಗೆ ಏರಿದ್ದರು. ಉಭಯ ಬಣಗಳು ಒಂದಾಗಬೇಕಾದಲ್ಲಿ ಶಶಿಕಲಾ ಕುಟುಂಬದ ಸದಸ್ಯರು ಪಕ್ಷದಲ್ಲಿರಬಾರದು ಎನ್ನುವ ಷರತ್ತನ್ನು ಮಾಜಿ ಸಿಎಂ ಪನ್ನೀರ್ ಸೆಲ್ವಂ ವಿಧಿಸಿದ್ದರು.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಯನ್ನು 8 ತುಂಡುಗಳಾಗಿ ಕತ್ತರಿಸಿದ್ದ ಪತ್ನಿಗೆ 30 ವರ್ಷ ಜೈಲು