Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬರೋಬ್ಬರಿ 11 ಡೋಸ್ ಲಸಿಕೆ ಪಡೆದ 84ರ ವೃದ್ಧ !

ಬರೋಬ್ಬರಿ 11 ಡೋಸ್ ಲಸಿಕೆ ಪಡೆದ 84ರ ವೃದ್ಧ !
ನವದೆಹಲಿ , ಬುಧವಾರ, 5 ಜನವರಿ 2022 (13:18 IST)
ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕಳೆದ ವರ್ಷ ಜನವರಿ 16ರಿಂದ ಲಸಿಕೆ ಅಭಿಯಾನ ಶುರುವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸರಿಯಾಗಿ ಒಂದು ವರ್ಷ ತುಂಬಲಿದೆ.

ಇಷ್ಟಾದರೂ ಇನ್ನೂ ಅನೇಕರಿಗೆ ಕೊವಿಡ್ 19 ಲಸಿಕೆ ಎರಡನೇ ಡೋಸ್ ಆಗಿಲ್ಲ. ಒಂದಷ್ಟು ಮಂದಿ ಮೊದಲನೇ ಡೋಸ್ ತೆಗೆದುಕೊಂಡಿಲ್ಲ. ಇಷ್ಟೆಲ್ಲದರ ಮಧ್ಯೆ ಇಲ್ಲೊಬ್ಬರು 84 ವರ್ಷದ ವೃದ್ಧ ಕೊರೊನಾ ಲಸಿಕೆ 11 ಡೋಸ್ ತೆಗೆದುಕೊಂಡಿದ್ದಾರೆ.

ಅಂದಹಾಗೆ, ಇವರ ಹೆಸರು ಬ್ರಹ್ಮದೇವ್ ಮಂಡಲ್. ಬಿಹಾರ ರಾಜ್ಯದ ಮಾದೇಪುರ ಜಿಲ್ಲೆಯ ಉದಕಿಶುಂಗಂಜ್ ಉಪ-ವಿಭಾಗದಲ್ಲಿರುವ ಓರೈ ಎಂಬ ಗ್ರಾಮದವರು. 11 ಡೋಸ್ ತೆಗೆದುಕೊಂಡು, 12ನೇ ಡೋಸ್ ಪಡೆಯಲು ಬಂದಾಗ ಸಿಕ್ಕಿಬಿದ್ದಿದ್ದಾರೆ.

ಇಷ್ಟೊಂದು ಡೋಸ್ ಲಸಿಕೆಯನ್ನು ಬ್ರಹ್ಮದೇವ್ ಹೇಗೆ ಪಡೆದರು ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು ಎಂದು ಮಾದೇಪುರ ಜಿಲ್ಲಾ ಸರ್ಜನ್ ತಿಳಿಸಿದ್ದಾರೆ.

ತಾವು ಕೊರೊನಾ ಲಸಿಕೆ 11 ಡೋಸ್ ಪಡೆದಿದ್ದನ್ನು ಮಂಡಲ್ ಒಪ್ಪಿಕೊಂಡಿದ್ದಾರೆ. ನಾನು ಕೊವಿಡ್ 19 ಲಸಿಕೆಯಿಂದ ಹಲವು ರೀತಿಯ ಅನುಕೂಲ ಪಡೆದಿದ್ದೇನೆ. ಹಾಗಾಗಿ ಪದೇಪದೆ ಅದನ್ನು ತೆಗೆದುಕೊಂಡೆ ಎಂದು ಹೇಳಿದ್ದಾರೆ. ಕೊರೊನಾ ಲಸಿಕೆಯನ್ನು ಹೊರತಂದು ಕೇಂದ್ರ ಸರ್ಕಾರ ತುಂಬ ಒಳ್ಳೆಯ ಕೆಲಸ ಮಾಡಿದೆ. ದಯವಿಟ್ಟು ಎಲ್ಲರೂ ಲಸಿಕೆ ಪಡೆಯಿರಿ ಎಂದು ಕರೆ ಕೊಟ್ಟಿದ್ದಾರೆ.

84ವರ್ಷದ ವೃದ್ಧ 11 ಡೋಸ್ ಪಡೆಯಲು ಸಾಧ್ಯವಾಗಿದ್ದು ಹೇಗೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆಫ್ಲೈನ್ ನೋಂದಣಿ ಮಾಡಿ ಲಸಿಕೆ ನೀಡಲಾಗುವ ಕ್ಯಾಂಪ್ಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಕಂಪ್ಯೂಟರ್ಲ್ಲಿ ಡಾಟಾಗಳನ್ನು ಇಡುವುದಕ್ಕೂ, ಆಫ್ಲೈನ್ನಲ್ಲಿ ಆಧಾರ್ ನಂಬರ್-ಫೋನ್ ನಂಬರ್ ಸಂಗ್ರಹಿಸಿ, ಲಸಿಕೆ ನೀಡುವುದಕ್ಕೂ ವ್ಯತ್ಯಾಸವಿದೆ. ಆದರೆ ಈ ವ್ಯಕ್ತಿಯ ವಿಷಯದಲ್ಲಿ ಏನಾಗಿದೆ ಎಂಬುದನ್ನು ತನಿಖೆ ನಡೆಸಲಾಗುವುದು ಎಂದು ಮಾದೇಪುರ ಜಿಲ್ಲೆಯ ಸಿವಿಲ್ ಸರ್ಜನ್ ಅಮರೇಂದ್ರ ಪ್ರತಾಪ್ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಉದ್ದೇಶ?