ಶೇಮ್ ಶೇಮ್ ಬೆಂಗಳೂರು: ಮಹಿಳೆಯ ತುಟಿಗೆ ಮುತ್ತಿಟ್ಟು, ನಾಲಿಗೆ ಕಚ್ಚಿ ಪರಾರಿಯಾದ ಕಾಮಾಂಧ

Webdunia
ಶುಕ್ರವಾರ, 6 ಜನವರಿ 2017 (19:38 IST)
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಮತ್ತು ಕಮ್ಮನಹಳ್ಳಿಯಲ್ಲಿ ನಡೆದ ದುಷ್ಕೃತ್ಯಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಆದರೆ ನಗರದಲ್ಲಿ ಅಂತಹ ಘಟನೆಗಳು ಮರುಕಳಿಸುತ್ತಲೇ ಇವೆ.
 
ಇಂದು ಮುಂಜಾನೆ ಕೆ. ಜಿ ಹಳ್ಳಿಯಲ್ಲಿ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಹೇಯ ಘಟನೆ ವರದಿಯಾಗಿದೆ.
 
ನಸುಕಿನ ಜಾವ 6.30ರ ಸುಮಾರಿಗೆ ಈ ಕೃತ್ಯ ನಡೆದಿದ್ದು, ಬಸ್ ಹತ್ತಲು ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿದ ಕಾಮುಕ ಆಕೆಯ ತುಟಿಗೆ ಮುತ್ತಿಟ್ಟು ನಾಲಿಗೆ ಕಚ್ಚಿದ್ದಾನೆ. ಯುವತಿ ಕಿರುಚಾಡುತ್ತಿದ್ದಂತೆ ಅಲ್ಲೇ ಹತ್ತಿರದ ಮನೆಯಲ್ಲಿದ್ದ ನಾಯಿ ಜೋರಾಗಿ ಬೊಗಳಿದೆ. ಕೂಡಲೇ ಸಾರ್ವಜನಿಕರು ಅಲ್ಲಿಗೋಡಿ ಬಂದಿದ್ದು ಕೀಚಕ ಮನಸ್ಥಿತಿಯ ಆರೋಪಿ ಪರಾರಿಯಾಗಿದ್ದಾನೆ. 
 
ಈ ದೃಶ್ಯಾವಳಿಗಳೆಲ್ಲ ಹತ್ತಿರದ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
 
ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಪಾಲಿಗೆ ಇಂದು ಮಹತ್ವದ ದಿನ

Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ವಾರಂತ್ಯಕ್ಕೆ ಭಾರೀ ಮಳೆ

ಮೂರು ವರ್ಷಗಳಿಂದ ನಾನು ಟೀಕೆ ಮಾಡಿದ್ದೇನೆ. ಈಗ ಅದಕ್ಕೆ ಸಮಯವಲ್ಲ

ಹಾಸನ ಜಿಲ್ಲೆಯ ಏಕೈಕ ಕೈ ಶಾಸಕ ಕೆಎಂ ಶಿವಲಿಂಗೇಗೌಡಗೆ ಸಚಿವ ಸ್ಥಾನ ನೀಡಲು ರಾಹುಲ್‌ಗೆ ಪತ್ರ

ಸಿದ್ದರಾಮಯ್ಯ ಈ ಮಾತು ಡಿಕೆ ಶಿವಕುಮಾರ್‌ಗೆ ಎಚ್ಚರಿಕೆ ಗಂಟೆ: ಡಿಕೆ ಸುಧಾಕರ್‌

ಮುಂದಿನ ಸುದ್ದಿ