ನವದೆಹಲಿ: ಭಾರತದ ವಿರುದ್ಧ ಮತ್ತೆ ಚೀನಾ-ಪಾಕ್ ಕ್ಯಾತೆ ತೆಗೆಯುತ್ತಾ? ಹಾಗೊಂದು ಸಂಭವವಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ಯಾವುದಕ್ಕೂ ಭಾರತ ಸನ್ನದ್ಧವಾಗಿರಬೇಕೆಂದು ಅವರು ಕರೆ ನೀಡಿದ್ದಾರೆ. ಡೋಕ್ಲಾಂನಲ್ಲಿ ಹುಟ್ಟಿಕೊಂಡ ಗಡಿ ಬಿಕ್ಕಟ್ಟು ಭಾರತ ಮತ್ತು ಚೀನಾ ನಡುವೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ತಂದೊಡ್ಡಲಿದೆ ಎಂಬುದರ ಸೂಚನೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಬಿಕ್ಕಟ್ಟು ಯುದ್ಧದ ವಾತಾವರಣಕ್ಕೆ ಕಾರಣವಾಗಬಹುದು. ಇದನ್ನು ಪಾಕಿಸ್ತಾನ ತನ್ನ ಲಾಭಕ್ಕೆ ಬಳಸಿಕೊಳ್ಳಬಹುದು ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ. ಇಂತಹ ಯಾವುದೇ ಸನ್ನಿವೇಶಕ್ಕೂ ನಾವು ತಯಾರಾಗಿರಬೇಕು ಎಂದು ಅವರು ಕರೆ ನೀಡಿದ್ದಾರೆ.