Webdunia - Bharat's app for daily news and videos

Install App

ನಿನ್ನ ಹೆಂಡ್ತಿನ ಗರ್ಭಿಣಿ ಮಾಡಿದ್ದು ನಾನೇ ಎಂದ ಆರೋಪಿ!

Webdunia
ಬುಧವಾರ, 2 ನವೆಂಬರ್ 2022 (07:28 IST)
ಲಕ್ನೋ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಅತ್ಯಾಚಾರ ಆರೋಪಿ ಯುವತಿಯೊಬ್ಬಳ ಜೀವನದಲ್ಲಿ ಚೆಲ್ಲಾಟವಾಡಿದ್ದಲ್ಲದೇ ಯುವತಿಯ ಗಂಡನಿಗೆ ಸಿನಿಮೀಯ ರೀತಿಯಲ್ಲಿ ಸತ್ಯ ಹೇಳಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅತ್ಯಾಚಾರ ಆರೋಪಿಯನ್ನು ಸೂರಜ್ ಎಂದು ಗುರುತಿಸಲಾಗಿದೆ. ಈತ ಎರಡು ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದ.

ಯುವತಿ ಪೋಷಕರೊಂದಿಗೆ ದೂರು ದಾಖಲಿಸಲು ಮುಂದಾದಾಗ ಆರೋಪಿ ಸೂರಜ್ ಯುವತಿಯನ್ನು ಮದುವೆಯಾಗುವುದಾಗಿ ಆಕೆಯ ತಾಯಿಗೆ ಭರವಸೆ ನೀಡಿದ್ದ.

ಅದಾದ 2 ತಿಂಗಳ ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ. ಅಷ್ಟರಲ್ಲಾಗಲೇ ಸಂತ್ರಸ್ತ ಯುವತಿ ಗರ್ಭಿಣಿಯಾಗಿದ್ದಳು. ಹೇಗೋ ಯುವತಿಯ ತಂದೆ ಬೇರೊಬ್ಬ ಹುಡುಗನಿಗೆ ಮದುವೆ ಮಾಡಿಸಿದ್ದರು. 

ಯುವತಿ ಮದುವೆಯಾದ ನಂತರ ತವರು ಮನೆಗೆ ಬಂದಿದ್ದಳು. ಈ ವೇಳೆ ಆರೋಪಿ ಸೂರಜ್ ಮತ್ತೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ಪ್ರತಿಭಟಿಸಿದ್ದಾಳೆ.

ಇದರಿಂದ ಕೋಪಗೊಂಡ ಆರೋಪಿ ಯುವತಿಯ ಪತಿಗೆ `ನಿನ್ನ ಹೆಂಡತಿಯನ್ನು ಗರ್ಭಿಣಿ ಮಾಡಿದ್ದೇನೆ, ಆಕೆಯ ಹೊಟ್ಟೆಯಲ್ಲಿ ನನ್ನ ಗುರುತು ಇದೆ’ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಪತಿ ಅದೇ ದಿನ ಪತ್ನಿಯನ್ನು ಬಿಟ್ಟು ಹೋಗಿದ್ದಾನೆ. ಕೆಲವು ತಿಂಗಳ ನಂತರ ಸಂತ್ರಸ್ತ ಯುವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments