ಹೊಸದಿಲ್ಲಿ: ಹೊಸ ಕಾರ್ಮಿಕ ಕಾನೂನಿನ ಅನ್ವಯ ಅ. 1ರಿಂದ ಕೆಲಸದ ತಾಸುಗಳು, ವೇತನ ಸ್ವರೂಪ ಇತ್ಯಾದಿ ಬದಲಾಗಲಿವೆ. ಹೊಸ ಕರಡು ಕಾನೂನಿನ ಪ್ರಕಾರ ಕೆಲಸದ ತಾಸುಗಳು 9ರಿಂದ 12ಕ್ಕೆ ಏರಲಿವೆ.
ಹೊಸ ಕಾನೂನಿನಲ್ಲಿ ಹೇಳಿ ರುವಂತೆ ಒಟ್ಟು ವೇತನದ ಶೇ. 50ರಷ್ಟು ಅಥವಾ ಅದಕ್ಕಿಂತ ಹೆಚ್ಚು ಮೂಲ ವೇತನ ಇರಲಿದೆ. ಇದರಿಂದ ಬಹುತೇಕ ಉದ್ಯೋಗಿಗಳ ವೇತನ ಸ್ವರೂಪದಲ್ಲಿ ಬದಲಾವಣೆ ಆಗಲಿದೆ. ಮೂಲ ವೇತನ ಏರಿಕೆಯಾಗುವ ಕಾರಣ ಕಾರ್ಮಿಕ ಭವಿಷ್ಯ ನಿಧಿ ದೇಣಿಗೆಯೂ ಹೆಚ್ಚಲಿದೆ.