Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೂವರು ಮುಸ್ಲಿಂ ಪುರುಷರ ವಿರುದ್ಧ ಮತಾಂತರದ ನಕಲಿ ದೂರು ದಾಖಲಿಸಿದ ಮಹಿಳೆ. ಕೊನೆಗೆ ಆಗಿದ್ದೇನು?

ಮೂವರು ಮುಸ್ಲಿಂ ಪುರುಷರ ವಿರುದ್ಧ ಮತಾಂತರದ  ನಕಲಿ ದೂರು ದಾಖಲಿಸಿದ ಮಹಿಳೆ. ಕೊನೆಗೆ ಆಗಿದ್ದೇನು?
ಬರೇಲಿ , ಸೋಮವಾರ, 4 ಜನವರಿ 2021 (08:39 IST)
ಬರೇಲಿ : 22 ವರ್ಷದ ವಿವಾಹಿತ ಮಹಿಳೆಯೊಬ್ಬಳು ಮೂವರು ಮುಸ್ಲಿಂ ಪುರುಷರ ವಿರುದ್ಧ ಮತಾಂತರದ ನಕಲಿ ದೂರು ದಾಖಲಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಮಹಿಳೆ ಮೂವರು ಪುರುಷರು ತನ್ನನ್ನು ಹಿಂಬಾಲಿಸುತ್ತಿದ್ದಾರೆ. ಹಾಗೂ ಅದರಲ್ಲೊಬ್ಬ ತನ್ನ ಬಳಿ ಮತಾಂತರಗೊಳಿಸಲು, ಮದುವೆಯಾಗಲು ಹೇಳಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಇದಕ್ಕೆ ಒಪ್ಪದಿದ್ದಕ್ಕೆ ತನ್ನ ಮನೆಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸುಳ್ಳು ದೂರು ನೀಡಿದ್ದಾಳೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದಾಗ ಮಹಿಳೆಯ ಕಟ್ಟುಕಥೆ ಬಯಲಿಗೆ ಬಂದಿದೆ. ಆಕೆಗೆ ಆ ಮೂವರಲ್ಲಿ ಒಬ್ಬನ ಜೊತೆ ಸಂಬಂಧದಲ್ಲಿದ್ದಳು. ಬಳಿಕ ಮನೆಯವರು ಆಕೆಯನ್ನು ತಮ್ಮ ಸಮುದಾಯದವರ ಜೊತೆ ಮದುವೆ ಮಾಡಿದ್ದರು ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ. ಆ ಮೂವರನ್ನು ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವ ನೆಪದಲ್ಲಿ ಹುಡುಗಿಯನ್ನು ಅಪಹರಿಸಿದ ವಿವಾಹಿತ