ಬೆಂಗಳೂರು: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಫೆಬ್ರವರಿ 14 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ಮದುವೆ ಡೇಟ್ ಫಿಕ್ಸ್ ಆದ್ರೂ ಈ ಜೋಡಿ ಬ್ಯಾಚುಲರ್ ಅಂತಿದ್ದಾರೆ!
ಅಂದರೆ ಈ ಇಬ್ಬರೂ ಜೋಡಿಯಾಗಿ ಅಭಿನಯಿಸಲಿರುವ ಹೊಸ ಸಿನಿಮಾ ಟೈಟಲ್ ಮಿಸ್ಟರ್ ಬ್ಯಾಚುಲರ್ ಎಂದು ಅನೌನ್ಸ್ ಆಗಿದೆ. ಲವ್ ಮಾಕ್ಟೇಲ್ ಬಳಿಕ ಈ ಜೋಡಿ ಜೊತೆಯಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾ ಇದಾಗಿದ್ದು, ನಾಯ್ಡು ಬಂಡಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯದಲ್ಲೇ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.