ಬಿಜೆಪಿ ಶಾಸಕರೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ನನ್ನ ಮಗಳ ಡಿಎನ್ ಎ ನನ್ನ ಪತಿಗೆ ಹೊಂದಾಣಿಕೆಯಾಗುತ್ತಿಲ್ಲ. ಅದು ಶಾಸಕರಿಗೆ ಹೊಂದಾಣಿಕೆ ಆಗುತ್ತದೆ ಎಂದು ಮಹಿಳೆಯೊಬ್ಬಳು ದೂರಿದ್ದಾಳೆ.
ಅಲ್ಲದೇ ಎರಡು ವರ್ಷಗಳಿಂದ ಶಾಸಕರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಈ ನಡುವೆ ಲೈಂಗಿಕ ಕಿರುಕುಳ ಮಾಡಿರುವ ಮಹಿಳೆ ಹಾಗೂ ಇತರ ನಾಲ್ವರ ವಿರುದ್ಧ ಶಾಸಕರ ಪತ್ನಿ ದೂರು ನೀಡಿದ್ದಾರೆ.
ಉತ್ತರಖಂಡದಲ್ಲಿ ಘಟನೆ ನಡೆದಿದ್ದು, ಶಾಸಕರ ಪತ್ನಿ ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.