Webdunia - Bharat's app for daily news and videos

Install App

ಭೀಕರ ಅಪಘಾತ; ಬೆಂಕಿ ಹೊತ್ತಿ ಉರಿದ ಬಸ್!

Webdunia
ಬುಧವಾರ, 10 ನವೆಂಬರ್ 2021 (12:07 IST)
ರಾಜಸ್ಥಾನ : ಖಾಸಗಿ ಬಸ್ ಮತ್ತು ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಬಸ್ಗೆ ಬೆಂಕಿ ಹೊತ್ತಿಕೊಂಡು ಸುಮಾರು 12 ಮಂದಿ ಸಜೀವ ದಹನವಾದ ದುರ್ಘಟನೆ ರಾಜಸ್ಥಾನದ ಬಾರ್ಮರ್-ಜೋಧ್ಪುರ ಹೆದ್ದಾರಿಯಲ್ಲಿ ನಡೆದಿದೆ.
ಈ ಖಾಸಗಿ ಬಸ್ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರು ಇದ್ದರು. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ಸಿಬ್ಬಂದಿ 10 ಮೃತದೇಹಗಳನ್ನು ಬಸ್ನಿಂದ ಹೊರತೆಗೆದಿದ್ದಾರೆ. 
ಈ ಬಸ್ ಬಲೋತ್ರಾದಿಂದ ಬೆಳಗ್ಗೆ 9.55ಕ್ಕೆ ಹೊರಟಿತ್ತು. ಟ್ಯಾಂಕರ್ ಎದುರಿನಿಂದ ಬಂದು ಡಿಕ್ಕಿಹೊಡೆದಿದೆ. ಇದರಲ್ಲಿ ಟ್ಯಾಂಕರ್ ಚಾಲಕ ರಸ್ತೆಯ ತಪ್ಪಾದ ಬದಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಟ್ಯಾಂಕರ್ ಡಿಕ್ಕಿಯಾಗುತ್ತಿದ್ದಂತೆ ಒಮ್ಮೆಲೇ ಬಸ್ಗೆ ಬೆಂಕಿ ತಗುಲಿದೆ. ಈ ಹೆದ್ದಾರಿಯಲ್ಲಿ ಸಿಕ್ಕಾಪಟೆ ಟ್ರಾಫಿಕ್ ಜಾಮ್ ಆಗಿದೆ. ಸ್ಥಳದಲ್ಲಿ ಅನೇಕ ಪೊಲೀಸ್ ಸಿಬ್ಬಂದಿಯಿದ್ದು, ರಕ್ಷಣಾ ಕಾರ್ಯಾಚರಣೆಯೂ ನಡೆಯುತ್ತಿದೆ. ಪಚ್ಪದ್ರ ಶಾಸಕ ಮದನ್ ಪ್ರಜಾಪತ್, ಉಸ್ತುವಾರಿ ಸಚಿವ ಸುಖರಾಮ್ ವಿಷ್ಣೋಯ್ ಇನ್ನಿತರ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಮಮಂದಿರದ ಪ್ರತಿಯೊಂದ ನಿರ್ಧಾರಗಳನ್ನು ಮೋದಿಯೇ ಮಾಡಿದ್ದರಿಂದ ದೇಣಿಗೆ ವಿವಾದಕ್ಕೂ ಅವರೇ ಉತ್ತರಿಸಬೇಕು

ಭಾರತೀಯ ಮೂಲದ ಯುವತಿಯನ್ನು ಕೊಂದ 7 ತಿಂಗಳ ಬಳಿಕ ಆಕೆಯ ಪ್ರಿಯಕರ ಅರೆಸ್ಟ್‌

ಡಿಕ್ಕಿಯ ರಭಸಕ್ಕೆ ಸೇತುವೆಯಿಂದ ಕೆಳಗೆ ಬಿದ್ದ ಬೆಂಗಳೂರಿಗೆ ಬರುತ್ತಿದ್ದ ವೋಲ್ವೋ ಬಸ್‌, 40 ಮಂದಿಗೆ ಗಾಯ, Video

ಬಿಡದಿ ಪಾದಯಾತ್ರೆಗೆ ಇದಕ್ಕಿಂತ ಶ್ರೇಷ್ಠವಾದ ಆಶೀರ್ವಾದ ಬೇರೊಂದಿರಲು ಸಾಧ್ಯವಿಲ್ಲ, ವಿಡಿಯೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ಬಿಡದಿ ಟೌನ್‌ಶಿಪ್‌: ಜಾಮೀನು ನೀಡಲು ಇಚ್ಛೆಯಿಲ್ಲದವರಿಗೆ ಒತ್ತಾಯವಿಲ್ಲ

ಮುಂದಿನ ಸುದ್ದಿ
Show comments