ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯ ದೇವಾಲಯವನ್ನು ಬಲಪಂಥೀಯ ಸಂಘಟನೆಯಾದ ಹಿಂದು ಮಹಾಸಭಾ ನಿರ್ಮಿಸಿದೆ.
ಹಿಂದು ಮಹಾಸಭಾ ಗ್ವಾಲಿಯರ್‌ನಲ್ಲಿರುವ ತನ್ನ ಕಚೇರಿಯಲ್ಲಿ ನಾಥುರಾಮ್ ಗೋಡ್ಸೆ ದೇವಾಲಯ ನಿರ್ಮಿಸಿದೆ. ನಂತರ ಆತನ ಪುಣ್ಯತಿಥಿ ಕೂಡಾ ಆಚರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಇದಕ್ಕಿಂತ ಮೊದಲು, ನಾಥುರಾಮ್ ಗೋಡ್ಸೆ ಹೆಸರಲ್ಲಿ ದೇವಾಲಯ ನಿರ್ಮಿಸುವ ಹಿಂದು ಮಹಾಸಭಾ ಪ್ರಸ್ತಾವನೆಯನ್ನು ಜಿಲ್ಲಾಡಳಿತ ತಿರಸ್ಕರಿಸಿತ್ತು
ಹಿಂದೂ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭರದ್ವಾಜ್, ಗ್ವಾಲಿಯರ್‌ನ ದೌಲತ್ ಗಂಜ್‌ನ ಕಛೇರಿಯಲ್ಲಿ 32 ಇಂಚು ಎತ್ತರದ ಮೂರ್ತಿ ಸ್ಥಾಪಿಸಿದ್ದಾರೆ. ಮುಂದೆ ಇತರ ಜಿಲ್ಲೆಗಳಲ್ಲಿ ದೇವಾಲಯ ನಿರ್ಮಾಣಕ್ಕಾಗಿ ಜಿಲ್ಲಾಡಳಿತದ ಅನುಮತಿ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಾವು ನಮ್ಮದೇ ಆದ ಸ್ಥಳದಲ್ಲಿ ದೇವಸ್ಥಾನವನ್ನು ಸ್ಥಾಪಿಸಿರುವುದರಿಂದ ಯಾರೂ ಇದಕ್ಕೆ ಯಾವುದೇ ಆಕ್ಷೇಪಣೆಯನ್ನು ಹೊಂದಿಲ್ಲ, ಇದು ಮಹಾಸಭಾದ ಸ್ವಂತ ಆಸ್ತಿಯಾಗಿದೆ" ಎಂದು ಭರದ್ವಾಜ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.