Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಾಂಧೀಜಿ ದೃಷ್ಟಿಕೋನದಿಂದ ದೇಶ ದೂರ: ಹಜಾರೆಯಿಂದ ಸತ್ಯಾಗೃಹದ ಎಚ್ಚರಿಕೆ

ಗಾಂಧೀಜಿ ದೃಷ್ಟಿಕೋನದಿಂದ ದೇಶ ದೂರ:  ಹಜಾರೆಯಿಂದ ಸತ್ಯಾಗೃಹದ ಎಚ್ಚರಿಕೆ
ನವದೆಹಲಿ , ಸೋಮವಾರ, 2 ಅಕ್ಟೋಬರ್ 2017 (12:08 IST)
ಗಾಂಧೀಜಿಯ ದೃಷ್ಟಿಕೋನದಿಂದ ದೇಶವು ದೂರ ಹೋಗುತ್ತಿದೆ. ಗಾಂಧಿಯವರ ತತ್ವ, ಸಿದ್ದಾಂತಗಳಿಗೆ ಸರಕಾರ ತಿಲಾಂಜಲಿ ನೀಡಿದೆ ಎಂದು ಆರೋಪಿಸಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಇಂದು ರಾಜ್‌ಘಾಟ್‌ನಲ್ಲಿ ಒಂದು ದಿನದ ಸಾಂಕೇತಿಕ ನಿರಶನ ಹಮ್ಮಿಕೊಂಡಿದ್ದಾರೆ.  
ಗಾಂಧಿ ಜಯಂತಿ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರಿಗೆ ಗೌರವ ಸಲ್ಲಿಸಿದ ನಂತರ ಹಿರಿಯ ಗಾಂಧಿವಾದಿ ಹಜಾರೆ, ಒಂದು ದಿನದ ನಿರಶನ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ,
 
"ಇಂದು ಅಕ್ಟೋಬರ್ 2, ಗಾಂಧಿ ಜಯಂತಿ ನಮ್ಮ ದೇಶವು ಸ್ವಾತಂತ್ರ್ಯ ಪಡೆದು 70 ವರ್ಷಗಳಾಗಿವೆ, ಆದರೆ, ಗಾಂಧಿಯವರು ನಮ್ಮ ದೇಶದ ಬಗ್ಗೆ ಕಂಡಿದ್ದ ಕನಸಿನಿಂದ ನಾವು ದೂರ ಹೋಗಿದ್ದೇವೆ, ಆದ್ದರಿಂದ, ನಾನು ಗಾಂಧೀಜಿಯವರ ಸಮಾಧಿಯ ಬಳಿ ನನ್ನ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದೇನೆ ಎಂದು ಹಜಾರೆ ತಿಳಿಸಿದ್ದಾರೆ.
 
ಸಾಂಕೇತಿಕ ನಿರಶನದ ನಂತರ ಭಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು.ಪ್ರಧಾನಿ ಮೋದಿಯವರಿಗೆ 30 ಪತ್ರಗಳನ್ನು ಬರೆದಿದ್ದೇನೆ. ಆದರೆ. ಇಲ್ಲಿಯವರೆಗೆ ಒಂದೇ ಒಂದು ಪತ್ರಕ್ಕೆ ಉತ್ತರ ದೊರೆತಿಲ್ಲ. ಪ್ರತಿಭಟನೆ ಆರಂಭಿಸಿದ ಸಂದರ್ಭದಲ್ಲಿ ಸರಕಾರದ ಮುಂದೆ ಹಲವು ವಿಷಯಗಳನ್ನು ಮುಂದಿಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಲ್ಲಿ ತಿಳಿಸಿದ್ದಾರೆ.   
 
ಲೋಕಪಾಲನ್ನು ಜಾರಿಗೆ ತರಲು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧಿ ಆದರ್ಶಗಳು ವಿಶ್ವದ ಲಕ್ಷಾಂತರ ಜನರಿಗೆ ಪ್ರೇರಣೆ: ಪ್ರಧಾನಿ ಮೋದಿ