ಪ್ರಧಾನಿ ನರೇಂದ್ರ ಮೋದಿಯಂತಹ ವ್ಯಕ್ತಿ ದೊರೆಯುವುದು ಕಷ್ಟ. ದೈವತ್ವದಿಂದ ಮಾತ್ರ ಇಂತಹ ವ್ಯಕ್ತಿ ದೊರೆಯುತ್ತಾರೆ. ಇಂತಹ ಕ್ರಿಯಾತ್ಮಕ ವ್ಯಕ್ತಿಗಳು ಅವತಾರಗಳು ರಾಜಕೀಯದಿಂದ ಉತ್ಪತ್ತಿಯಾಗಲು ಸಾಧ್ಯವಿಲ್ಲ.ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೌತಮ ಬುದ್ಧರಂತಿರುವ ಪ್ರಧಾನಿ ನರೇಂದ್ರ ಮೋದಿ ತವರಿನಲ್ಲಿ ಜಾತಿಯ ಆಧಾರದ ಮೇಲೆ ಮತಚಲಾಯಿಸುವುದು ಪಾಪ ಮತ್ತು ನೈತಿಕತೆಯ ಕುಸಿತ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.
ರಾಜ್‌ಕೋಟ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸಭಿಕರೊಂದಿಗೆ ಮಾತನಾಡಿದ ಪರೇಶ್ ರಾವಲ್ ನಿಮ್ಮ ಮಕ್ಕಳು ಪ್ರಧಾನಿ ಮೋದಿಯಂತಾಗಬೇಕೆ ಅಥವಾ ರಾಹುಲ್ ಗಾಂಧಿಯವರಂತಾಗಬೇಕೆ ಎಂದು ಪ್ರಶ್ನಿಸಿದರು.
ಗೌತಮ್ ಬುದ್ಧನಂತೆಯೇ ಕುಟುಂಬವನ್ನು ತೊರೆದು ದೇಶದ ಸೇವೆಗೆ ಹೊರಟಿರುವ ವ್ಯಕ್ತಿಯ ರಾಜ್ಯದಲ್ಲಿ ಮತ್ತು ಜಾತಿ ಮತ್ತು ಮತಗಳ ಆಧಾರದ ಮೇಲೆ ನಾವು ಮತ ಚಲಾಯಿಸಲು ನಿರ್ಧರಿಸಿದರೆ, ನಾವು ಕೃತಜ್ಞರಾಗಿರದ ಜನರು. ಇದು ಒಂದು ಪಾಪ, ನೈತಿಕತೆಯ ಕುಸಿತ. ನಾವು ಸರ್ದಾರ್ ಪಟೇಲ್ ಮತ್ತು ಮಹಾತ್ಮ ಗಾಂಧಿ ತವರೂರಿನ ಜನತೆ ಎನ್ನುವುದನ್ನು ಮರೆಯಬಾರದು ಎಂದು ಅಹ್ಮದಾಬಾದ್ (ಪೂರ್ವ) ಸಂಸದ ಪರೇಸ್ ರಾವಲ್ ತಿಳಿಸಿದ್ದಾರೆ.