ವಡೋದರಾ : 6, 9 ಮತ್ತು 12 ವರ್ಷ ವಯಸ್ಸಿನ ಮೂವರು ಅಪ್ರಾಪ್ತ ಬಾಲಕಿಯರನ್ನು 44 ವರ್ಷದ ವ್ಯಕ್ತಿಯೊಬ್ಬ 1 ವರ್ಷದಿಂದ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ.
ಆರೋಪಿ ಹಾಗೂ ಸಂತ್ರಸ್ತೆಯರು ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಯಾರು ಇಲ್ಲದಿರುವಾಗ ಈತ ಮನೆಗೆ ನುಗ್ಗಿ ಇಂತಹ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಆದರೆ ಬಾಲಕಿಯರು ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಆದರೆ ಮಹಿಳೆಯೊಬ್ಬರು ಇವರಿಗೆ ‘ಗುಡ್ ಟಚ್ ಬ್ಯಾಡ್ ಟಚ್’ ಬಗ್ಗೆ ಪಾಠಮಾಡುತ್ತಿದ್ದಾಗ ಬಾಲಕಿಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದಾರೆ.
ತಕ್ಷಣ ಮಹಿಳೆ ಅವರ ಮನೆಯವರಿಗೆ ಈ ವಿಚಾರ ತಿಳಿಸಿ ಅವರ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.