Publish Date: Thu, 12 Nov 2020 (06:20 IST)
Updated Date: Thu, 12 Nov 2020 (06:21 IST)
ಉತ್ತರ ಪ್ರದೇಶ : ಪ್ರೇಮಿಗಳ ನಡುವೆ ವಾಗ್ವಾದ ನಡೆದ ಹಿನ್ನಲೆಯಲ್ಲಿ ಪ್ರಿಯತಮೆಯೊಬ್ಬಳು ತನ್ನ ಪ್ರೇಮಿಯನ್ನು ರುಬ್ಬುವ ಕಲ್ಲು ಬಳಸಿ ಕೊಂದ ಘಟನೆ ಉತ್ತರ ಪ್ರದೇಶದ ಹಮೀರ್ ಪುರ ಜಿಲ್ಲೆಯ ರಾಥ್ ಪ್ರದೇಶದಲ್ಲಿ ನಡೆದಿದೆ.
ವೀರೇಂದ್ರ(23) ಮೃತಪಟ್ಟ ಪ್ರೇಮಿ, ವರ್ಷಾ ಅನುರಗಿ ಕೊಲೆ ಮಾಡಿದ ಪ್ರಿಯತಮೆ. ಇವರಿಬ್ಬರು ಸಂಬಂಧ ಹೊಂದಿದ್ದರು. ಮೃತನ ತಾಯಿ ಮತ್ತು ಸಹೋದರ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಪ್ರೇಮಿಗಳ ನಡುವೆ ವಾಗ್ವಾದ ನಡೆದಿದೆ. ಬಳಿಕ ಆಕೆ ಪ್ರಿಯತಮನನ್ನು ರುಬ್ಬುವ ಕಲ್ಲಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾಳೆ.
ತಾಯಿ ಮನೆಗೆ ಬಂದಾಗ ಮಗ ರಕ್ತದಲ್ಲಿ ಕೊಳದಲ್ಲಿ ಬಿದ್ದು ಸತ್ತಿರುವುದನ್ನು ಕಂಡು ಪೊಲಿಸರಿಗೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.