Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರನೇ ಮಗುವಿನ ಡೆಲಿವರಿ ಶುಲ್ಕ ಪಾವತಿಸಲು ಮೂರನೇ ಮಗುವನ್ನು ಮಾರಾಟ ಮಾಡಿದ ತಂದೆ

ಆರನೇ ಮಗುವಿನ ಡೆಲಿವರಿ ಶುಲ್ಕ ಪಾವತಿಸಲು ಮೂರನೇ ಮಗುವನ್ನು ಮಾರಾಟ ಮಾಡಿದ ತಂದೆ

Sampriya

ಉತ್ತರ ಪ್ರದೇಶ , ಭಾನುವಾರ, 8 ಸೆಪ್ಟಂಬರ್ 2024 (11:14 IST)
Photo Courtesy X
ಉತ್ತರ ಪ್ರದೇಶ: ಆಸ್ಪತ್ರೆಯ ಶುಲ್ಕ ಪಾವತಿಸಲು ಸಾಧ್ಯವಾಗದ್ದಕ್ಕೆ ತಂದೆಯೊಬ್ಬ ತನ್ನ ಮೂರು ವರ್ಷದ ಮಗುವನ್ನು ಮಾರಾಟ ಮಾಡಿದ ಘಟನೆ ಇಲ್ಲಿ ನಡೆದಿದೆ.

ಆರನೇ ಮಗುವಿನ ಡೆವಿವರಿಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತಾಯಿ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡಲು ತನ್ನ ಮೂರನೇ ಮಗುವನ್ನು ಮಾರಾಟ ಮಾಡಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬರ್ವಾಪಟ್ಟಿಯ ನಿವಾಸಿ ಹರೀಶ್ ಪಟೇಲ್ ಎಂದು ಗುರುತಿಸಲಾಗಿದೆ.

ಆರೋಪಿ ತನ್ನ ಪತ್ನಿಯನ್ನು ಆರನೇ ಮಗುವಿನ ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಿಲಿಸಿದ್ದ. ಆದರೆ ಆಸ್ಪತ್ರೆಯ ಶುಲ್ಕವನ್ನು ಭರಿಸಲು ಆಗದ ಪಟೇಲ್, ತನ್ನ ಮೂರನೇ ಮಗುವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದನು.ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದ ಹಾಗೇ ಪ್ರಕರಣದಲ್ಲಿ ಭಾಗಿಯಾಗಿರುವ ಮಗುವನ್ನು ದತ್ತು ಪಡೆದ ಪೋಷಕರು, ಆಸ್ಪತ್ರೆಯ ಸಹಾಯಕಿ, ನಕಲಿ ವೈದ್ಯೆ ತಾರಾ ಕುಶ್ವಾಹಾ ಸೇರಿ ಐವರನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಫಲರಾದ ಪೊಲೀಸ್‌ ಕಾನ್‌ಸ್ಟೆಬಲ್ ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಮಿಶ್ರಾ ಪ್ರತಿಕ್ರಿಯಿಸಿ, ಮಗುವನ್ನು ಪೋಷಕರಿಗೆ ಹಿಂತಿರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣೇಶೋತ್ಸವ: ಮೂರ್ತಿ ಪ್ರತಿಷ್ಠಾಪಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್