ಜೈಪುರ/ಉದೈಪುರ: ಉದಯಪುರ ಜಿಲ್ಲೆಯ ಝಡೋಲ್ ಗ್ರಾಮದ 55 ವರ್ಷದ ಮಹಿಳೆಯೊಬ್ಬರು 17ನೇ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾರೆ.
ಮೊಮ್ಮಕ್ಕಳನ್ನೂ ಎತ್ತಿ ಆಡಿಸುತ್ತಿರುವ ರಾಜಸ್ಥಾನದ ಉದಯಪುರದ 55 ವರ್ಷದ ಮಹಿಳೆಯ 17ನೇ ಹೆರಿಗೆ ಯಶಸ್ವಿಯಾಗಿದೆ.
ಜಾದೋಲ್ ಬ್ಲಾಕ್‌ನಲ್ಲಿರುವ ರೇಖಾ ಕಲ್ಬೆಲಿಯಾ ಎಂಬ ಮಹಿಳೆ ಸ್ಥಳೀಯ ಆಸ್ಪತ್ರೆಯಲ್ಲಿ ತನ್ನ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರ ತಿಳಿದು ತಾಯಿ ಮಗುವನ್ನು ನೋಡಲು ಸಂಬಂಧಿಕರು, ಊರಿನವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
17ನೇ ಮಗುವಿಗೆ ರೇಖಾ ಜನ್ಮ ನೀಡುವ ಮೂಲಕ ತಮ್ಮ ಕುಟುಂಬದ ಗಾತ್ರವನ್ನು 24ಕ್ಕೆ ಹೆಚ್ಚಿಸಿದ್ದಾರೆ. ಇದರಲ್ಲಿ ಆಕೆಯ 35 ವರ್ಷದ ಮಗ, ಸೊಸೆ ಮತ್ತು ಮೊಮ್ಮಕ್ಕಳು ಸೇರಿದ್ದಾರೆ.
ದುರಂತವೆಂದರೆ, ಅವಳ ಐದು ಮಕ್ಕಳು ಹುಟ್ಟಿದ ಸ್ವಲ್ಪ ಸಮಯದ ನಂತರ ನಿಧನರಾಗಿದ್ದಾರೆ. ಕುಟುಂಬವು ಪ್ರಸ್ತುತ ತೀವ್ರ ಆರ್ಥಿಕ ತೊಂದರೆಗಳಿಂದ ಬಳಲುತ್ತಿದೆ ಮತ್ತು ಸ್ಥಿರವಾದ ವಸತಿ ಕೊರತೆಯಿದೆ.