ಲಕ್ನೋ(ಆ.17): 2022ರ ಉತ್ತರ ಪ್ರೇದೇಶ ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆಸಿರುವ ಕಾಂಗ್ರೆಸ್ ಪಕ್ಷ, ಜನರನ್ನು ತಲುಪಲು ರಾಜ್ಯದ 75 ಜಿಲ್ಲೆಗಳ 30 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ತಲಾ 75 ಗಂಟೆಗಳನ್ನು ಕಳೆಯಲು ಕಾಂಗ್ರೆಸ್ ನಾಯಕರಿಗೆ ಹಾಗೂ ಪಕ್ಷದ ಕಾರ್ಯಕತರಿಗೆ ಸಲಹೆ ನೀಡಿದೆ.
ಕಾಂಗ್ರೆಸ್ ನಡೆಸುತ್ತಿರುವ ಜೈ ಭಾರತ್ ಮಹಾಸಂಪರ್ಕ ಅಭಿಯಾನ ಆಗಸ್ಟ್ 19ರಿಂದ ಆರಂಭವಾಗಲಿದೆ. ಜನರನ್ನು ನೇರವಾಗಿ ಭೇಟಿ ಮಾಡಿ ಪಕ್ಷದ ಕಾರ್ಯಗಳನ್ನು ತಿಳಿಸಲು 75 ಜಿಲ್ಲೆಗಳಲ್ಲಿ ತಲಾ 75 ಗಂಟೆಗಳನ್ನು ಕಳೆಯಲು ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ತಿಳಿಸಲಾಗಿದೆ.
ನಮ್ಮ ಪಕ್ಷ ಮುಂಖ್ಯಮಂತ್ರಿ ಅಭ್ಯರ್ಥಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿಲ್ಲ. ರಾಜ್ಯದ 403 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸ್ಪರ್ಧೆ ಮಾಡುತ್ತದೆ. ಅಭಿಯಾನದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಗ್ರಾಮದ ಜನರ ಮನೆಯಲ್ಲೇ ಉಳಿದುಕೊಂಡು ಅವರ ಕಷ್ಟಸುಖ ಆಲಿಸುತ್ತಾರೆ. ದಿನಕ್ಕೆ ಒಂದು ಗಂಟೆ ಶ್ರಮದಾನ ಮಾಡುತ್ತಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಉಪ ಪ್ರಭಾರಿ ಗುರ್ಜಾರ್ ಹೇಳಿದ್ದಾರೆ.