ನವದೆಹಲಿ: ಆರೋಗ್ಯವಂತರಾಗಿರಬೇಕಾದರೆ ಎಷ್ಟು ಗಂಟೆ ನಿದ್ರೆ ಅಗತ್ಯ ಎಂಬ ಪ್ರಶ್ನೆಗೆ ಅಧ್ಯಯನಕಾರರು ಉತ್ತರ ನೀಡಿದ್ದಾರೆ.
ಕ್ಯಾಂಬ್ರಿಡ್ಜ್ ವಿವಿಯ ಅಧ‍್ಯಯನಕಾರರು ಸುಮಾರು 58 ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿಗೆ 7 ರಿಂದ 8 ಗಂಟೆ ನಿದ್ರೆ ಅನಿವಾರ್ಯ ಎಂದಿದ್ದಾರೆ.
7 ಗಂಟೆ ನಿದ್ರೆ ಮಾಡುವ ವ್ಯಕ್ತಿಗಳ ಆರೋಗ್ಯವೂ ಚೆನ್ನಾಗಿರುತ್ತದೆ. ಹೆಚ್ಚು ನಿದ್ರಿಸುವುದೂ ಅಪಾಯಕಾರಿ. ಇದರಿಂದ ಮಾನಸಿಕ ಸಮಸ್ಯೆಗಳೂ ಬರುವ ಸಾಧ‍್ಯತೆಯಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.