ರೈಲ್ವೆ ಅಪಘಾತಗಳ ಸರಣಿ ಮುಂದುವರೆದಿದೆ. ಹೊಸ ರೈಲ್ವೆ ಸಚಿವರು ಬಂದ ಬಳಿಕ ಮೊದಲ ಅವಘಡ ಉತ್ತರಪ್ರದೇಶದಲ್ಲಿ ಸಂಭವಿಸಿದೆ. ಹೌರಾ-ಜಗಲ್ಪುರ್ ನಡುವೆ ಸಂಚರಿಸುತ್ತಿದ್ದ ಶಕ್ತಿ ಪುಂಜ್ ಎಕ್ಸ್ ಪ್ರೆಸ್ ರೈಲಿನ 7 ಬೋಗಿಗಳು ಹಳಿ ತಪ್ಪಿವೆ.
ಬೆಳಗ್ಗೆ 6.30ರ ಹೊತ್ತಿಗೆ ಒಬ್ರಾದಿಂದ ಹೊರಟ ರೈಲು 8.30ರ ಹೊತ್ತಿಗೆ ಹಳಿ ತಪ್ಪಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಹಳಿತಪ್ಪಿದ ಬೋಗಿಗಳಲ್ಲಿದ್ದ ಜನರನ್ನ ಮುಂಬದಿಯ ಬೋಗಿಗಳಿಗೆ ಸ್ಥಳಾಂತರಿಸಿದ್ದು, ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ಸಿಂಗುರೌಲಿ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಾಫಿ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿದೆ.
ಆದರೆ, ರೈಲು ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಆ ಬಳಿಕವಷ್ಟೇ ತಿಳಿಸುವುದಾಗಿ ಸಚಿವರು ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಕಳೆದ ಕೆಲವೇ ತಿಂಗಳಲ್ಲಿ ಹಲವು ರೈಲ್ವೆ ಅಪಘಾತಗಳು ನಡೆದಿದ್ದು, ರೈಲ್ವೆ ಸಚಿವರ ತಲೆದಂಡವೂ ಆಗಿದೆ. ಈ ಅವಘಡಗಳ ಹಿಮದೆ ದುಷ್ಕರ್ಮಿಗಳ ಕೈವಾಡವಿರುವ ಬಗ್ಗೆಯೂ ಶಂಕೆ ವ್ಯಕ್ತವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ