Publish Date: Wed, 17 Nov 2021 (09:05 IST)
Updated Date: Wed, 17 Nov 2021 (09:12 IST)
ರಾಜಸ್ಥಾನ್: ಆರು ವರ್ಷದ ಬಾಲಕಿ ಮೇಲೆ ಟ್ಯೂಷನ್ ಶಿಕ್ಷಕನೇ ಅತ್ಯಾಚಾರವೆಸಗಿದ ಹೇಯ ಕೃತ್ಯ ರಾಜಸ್ಥಾನ್ ನಲ್ಲಿ ನಡೆದಿದೆ.
ಈ ಸಂಬಂಧ 43 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತರಗತಿ ಮುಗಿದ ಬಳಿಕ ಉಳಿದೆಲ್ಲಾ ಮಕ್ಕಳನ್ನು ಮನೆಗೆ ತೆರಳುವಂತೆ ಹೇಳಿದ ಆರೋಪಿ ಈಕೆಯನ್ನು ಉಳಿಸಿಕೊಂಡು ಅತ್ಯಾಚಾರವೆಸಗಿದ್ದಾನೆ.
ಮನೆಗೆ ಮರಳಿದ ಬಳಿಕ ಬಾಲಕಿ ನಡೆದಿದ್ದೆಲ್ಲವನ್ನೂ ಕುಟುಂಬದವರಿಗೆ ತಿಳಿಸಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.