Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ: ಅಣ್ಣಾಡಿಎಂಕೆ ಸಭೆಗೆ 40 ಶಾಸಕರ ಗೈರು

ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ: ಅಣ್ಣಾಡಿಎಂಕೆ ಸಭೆಗೆ 40 ಶಾಸಕರ ಗೈರು
ಚೆನ್ನೈ , ಸೋಮವಾರ, 28 ಆಗಸ್ಟ್ 2017 (12:51 IST)
ಅಣ್ಣಾಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಸಿಎಂ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣದ ವೀಲೀನದ ಬಳಿಕವೂ ಮತ್ತೊಂದು ಸಂಕಷ್ಟ ಎದುರಾಗಿದೆ.  
 

ಪಳನಿಸ್ವಾಮಿ ಕರೆದಿರುವ ಶಾಸಕಾಮಗ ಪಕ್ಷದ ಸಭೆಗೆ 40 ಶಾಸಕರು ಗೈರು ಹಾಜರಾಗಿದ್ಧಾರೆ. ಪಕ್ಷದಲ್ಲಿ ಮೂಲೆಗುಂಪಾಗಿರುವ ಟಿಟಿವಿ ದಿನಕರನ್ ನನಗೆ 22 ಶಾಸಕರ ಬೆಂಬಲವಿದೆ ಎಂದು ಘೋಷಿಸಿಕೊಂಡಿದ್ದು, ಪಳನಿಸ್ವಾಮಿ ಸರ್ಕಾರಕ್ಕೆ ಮುಳಗು ನೀರು ತರಲು ಮುಂದಾಗಿದ್ದಾರೆ. ಈ ಮಧ್ಯೆ, 40 ಶಾಸಕರು ಶಾಸಕಾಂಗ ಸಭೆಗೆ ಗೈರಾಗಿದ್ದು, ದಿನಕರನ್ ಹೇಳಿದ್ದಕ್ಕಿಂತಲೂ ಹೆಚ್ಚಿನ ಶಾಸಕರ ಬೆಂಬಲವಿದೆಯಾ ಎಂಬ ಻ನುಮಾನ ಮೂಡಲಾರಂಭಿಸಿದೆ.

ಈ ಮಧ್ಯೆ, ಟಿಟಿವಿ ದಿನಕರನ್ 19 ಶಾಸಕರ ಜೊತೆ ತೆರಳಿ ರಾಜ್ಯಪಾಲರಿಗೆ ಸಿಎಂ ವಿರುದ್ಧ ದೂರು ನೀಡಿದ್ದರು. ಸಿಎಂ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ, ನಿನ್ನೆ ರಾಜ್ಯಪಾಲರನ್ನ ಭೇಟಿಯಾದ ಡಿಎಂಕೆ ಸದಸ್ಯರು ಪಳನಿಸ್ವಾಮಿ ಸರ್ಕಾರದ ವಿಶ್ವಾಸಮತಯಾಚನೆಗೆ ಮನವಿ ಸಲ್ಲಿಸಿದ್ದಾರೆ.

ಮೂಲಗಳ ಪ್ರಕಾರ, ಪಳನಿಸ್ವಾಮಿ ಸರ್ಕಾರವನ್ನ ಉರುಳಿಸುವುದು ಟಿಟಿವಿ ದಿನಕರನ್ ಬಣದ ಉದ್ದೇಶವಲ್ಲ. ಶಶಿಕಲಾ ಈಗಳು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಟಿಟಿವಿ ದಿನಕರನ್ ಉಪ ಪ್ರಧಾನ ಕಾರ್ಯದರ್ಶಿ ಎನ್ನುವುದನ್ನ ಪಳನಿ ಸ್ವಾಮಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಷ್ಟೇ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂಕೋರ್ಟ್`ನ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ಪ್ರಮಾಣ