Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸುಪ್ರೀಂಕೋರ್ಟ್`ನ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ಪ್ರಮಾಣ

ಸುಪ್ರೀಂಕೋರ್ಟ್`ನ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ಪ್ರಮಾಣ
ನವದೆಹಲಿ , ಸೋಮವಾರ, 28 ಆಗಸ್ಟ್ 2017 (12:27 IST)
ಸುಪ್ರೀಂಕೋರ್ಟ್`ನ 45ನೇ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪ್ರತಿಜ್ಞಾವಿಧಿ ಭೋದಿಸಿದ್ದಾರೆ.

64 ವರ್ಷದ ಜಸ್ಟೀಸ್ ಮಿಶ್ರಾ, ಜೆ.ಎಸ್. ಖೇಹರ್ ಬಳಿಕ ಸುಪ್ರೀಂಕೋರ್ಟ್`ನ ಅತ್ಯಂತ ಹಿರಿಯ ನ್ಯಾಯಮೂರ್ತಿ,  ಒಡಿಶಾದಿಂದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೇರುತ್ತಿರುವ ಮೂರನೇಯವರು ದೀಪಕ್ ಮಿಶ್ರಾ. ಜಸ್ಟೀಸ್ ಮಿಶ್ರಾಜಸ್ಟೀಸ್ ರಂಗನಾಥ್ ಮಿಶ್ರಾ ಮತ್ತು ಜಿ.ಬಿ.ಪಟ್ನಾಯಕ್ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ಹಹಿಸಿದ್ದರು.

ಕ್ರಿಮಿನಲ್ ಮಾನನಷ್ಟ ವಿಚಾರಣೆಗಾಗಿ ಐಪಿಸಿ ಸೆಕ್ಷನ್ 499 ಮತ್ತು 500ರ ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿದ ನ್ಯಾಯಾಧೀಶರ ಪೀಠದ ಮುಖ್ಯಸ್ಥರಾಗಿ ಮಿಶ್ರಾ ಕೆಲಸ ಮಾಡಿದ್ದಾರೆ. ಬಡವರ್ಗಗಳಿಗೆ ನ್ಯಾಯದಾನ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನ ಕೈಗೊಂಡಿದ್ದಾರೆ. ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲೂ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾನೇ ಜಯಲಲಿತಾ, ಶೋಭನ್ ಬಾಬು ಪುತ್ರಿ: ಪ್ರಧಾನಿ, ರಾಷ್ಟ್ರಪತಿ, ಸುಪ್ರೀಂಕೋರ್ಟ್`ಗೆ ಪತ್ರ