ಹೈದರಾಬಾದ್: ಮದುವೆಯಾಗಲು ಹುಡುಗಿ ಸಿಗಲ್ಲ ಎಂದು ಕೊರಗುತ್ತಿದ್ದ ಅರ್ಚಕರ ನೆರವಿಗೆ ತೆಲಂಗಾಣ ಸರ್ಕಾರ ಮುಂದೆ ಬಂದಿದೆ. ‘ಕಲ್ಯಾಣಮಸ್ತು’ ಎಂಬ ಹೊಸ ಯೋಜನೆಯನ್ನು ತರಲು ತೆಲಂಗಾಣ ಸರ್ಕಾರ ಮುಂದಾಗಿದೆ.
ಅದರಂತೆ ಅರ್ಚಕರನ್ನು ಮದುವೆಯಾಗುವವರಿಗೆ 3 ಲಕ್ಷ ರೂ. ನಗದು ಮತ್ತು ಮದುವೆ ಖರ್ಚಿಗೆ 1 ಲಕ್ಷ ರೂ. ಸಿಗಲಿದೆ. ಮುಂದಿನ ತಿಂಗಳಿನಿಂದಲೇ ಈ ಯೋಜನೆ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆಯಂತೆ.
ಆದಾಯ ಕಡಿಮೆ ಎನ್ನುವ ಕಾರಣಕ್ಕೆ ಅರ್ಚಕರನ್ನು ಮದುವೆ ಮಾಡಲು ಯುವತಿಯರು ಹಿಂದೇಟು ಹಾಕುತ್ತಾರೆ. ಹೀಗಾಗಿ ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕರ ನೆರವಿಗೆ ಬರಲು ಸರ್ಕಾರ ಇಂತಹದ್ದೊಂದು ಯೋಜನೆ ಜಾರಿಗೆ ತರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ