ಹೈದರಾಬಾದ್: ಬಾಹುಬಲಿ 2 ಜನಪ್ರಿಯ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರೆ. ಇವರ ನಿಶ್ಚಿತಾರ್ಥ ಡಿಸೆಂಬರ್ ನಲ್ಲಿ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಪ್ರಭಾಸ್ ಇತ್ತೀಚೆಗೆ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅನುಷ್ಕಾ ಜತೆಗೆ ತನಗೆ ತುಂಬಾ ವರ್ಷಗಳ ಸ್ನೇಹವಿರುವುದು ನಿಜ. ಆದರೆ ಮದುವೆಯ ಮಟ್ಟಕ್ಕೆ ನಾವು ಯೋಚಿಸಿಯೇ ಇಲ್ಲ ಎಂದಿದ್ದಾರೆ.
‘ನಾವಿಬ್ಬರೂ 9 ವರ್ಷಗಳಿಂದ ಬಲ್ಲವರು. ಆಕೆ ನಮ್ಮ ಫ್ಯಾಮಿಲಿ ಫ್ರೆಂಡ್. ಹಾಗಂತ ಮದುವೆ ಬಗ್ಗೆ ನಮಗೆ ಯಾವತ್ತೂ ಯೋಚನೆ ಬಂದಿಲ್ಲ. ಮೊದಲೆಲ್ಲಾ ಲವ್ ಬಗ್ಗೆ ಗಾಸಿಪ್ ಕೇಳಿ ಬಂದಾಗ ತುಂಬಾ ಅಪ್ ಸೆಟ್ ಆಗುತ್ತಿದ್ದೆ. ಈಗ ನಾವಿಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ