ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಣದ 35 ಶಾಸಕರು ಪನ್ನೀರ್‌ಸೆಲ್ವಂ ಬಣಕ್ಕೆ ಸೇರಲಿದ್ದಾರೆ. ಅದರಲ್ಲಿ ಕೆಲವರು ಸಚಿವರಿದ್ದಾರೆ ಎಂದು ಓಪಿಎಸ್ ಬಣದ ನಾಯಕ ಎಸ್.ಸೆಮ್ಮಾಲೈ ಹೇಳಿದ್ದಾರೆ.
ಸಚಿವರು ಸೇರಿದಂತೆ ಒಟ್ಟು 35 ಶಾಸಕರು ಓಪಿಎಸ್ ಬಣ ಸೇರಲು ಸಿದ್ದರಾಗಿದ್ದಾರೆ. ಒಂದು ವೇಳೆ, ಶಾಸಕರು ಓಪಿಎಸ್ ಬಣಕ್ಕೆ ಸೇರಿದಲ್ಲಿ ಸರಕಾರ ಪತನವಾಗುತ್ತದೆ. ಸರಕಾರಕ್ಕೆ ಜನತೆಯ ಬೆಂಬಲ ಕೂಡಾ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
ಎಐಎಡಿಎಂಕೆಯ ಎರಡು ಬಣಗಳ ನಡುವಿನ ಮಾತುಕತೆಗಳಲ್ಲಿ ಮುಂದುವರಿದಿದೆ. ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಮೇ 12 ರಂದು ಸೇಲಂ ನಗರಕ್ಕೆ ಆಗಮಿಸುತ್ತಿದ್ದು ತಮ್ಮ ರಾಜ್ಯ ಪ್ರವಾಸವನ್ನು ಮುಂದುವರೆಸುತ್ತಿದ್ದಾರೆ. ಸೇಲಂ ಜಿಲ್ಲೆಯ ಪಕ್ಷದ ಮುಖಂಡರನ್ನು ಭೇಟಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ತಮಿಳುನಾಡಿನಲ್ಲಿ ದಿವಂಗತ ಮಾಜಿ ಸಿಎಂ ಜಯಲಲಿತಾ ಹೆಸರನ್ನು ಬಳಸಿಕೊಳ್ಳುವ ಯಾವುದೇ ಪಕ್ಷವನ್ನು ನಾಶಗೊಳಿಸಲಾಗುವುದು ಎಂದು ಒ.ಪನ್ನೀರ್‌ಸೆಲ್ವಂ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.