Publish Date: Fri, 24 Sep 2021 (11:35 IST)
Updated Date: Fri, 24 Sep 2021 (09:36 IST)
ಮುಂಬೈ: 15 ವರ್ಷದ ಅಪ್ರಾಪ್ತೆ ಮೇಲೆ 29 ಜನ ಕಾಮುಕರ ಗುಂಪು ಅತ್ಯಾಚಾರವೆಸಗಿದ ಧಾರುಣ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಕಳೆದ ಕೆಲವು ತಿಂಗಳುಗಳಿಂದ ಕಾಮುಕರು ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದು ತಿಳಿದುಬಂದಿದೆ. ಈ ಕಾಮುಕರ ಪೈಕಿ ಕೆಲವರು ಅಪ್ರಾಪ್ತ ವಯಸ್ಸಿನವರೂ ಇದ್ದಾರೆಂದು ತಿಳಿದುಬಂದಿದೆ.
ಕಾಮುಕರು ತಮ್ಮ ಕೃತ್ಯವನ್ನು ವಿಡಿಯೋ ಮಾಡಿ ಸಂತ್ರಸ್ತೆಗೆ ಬೆದರಿಕೆ ಹಾಕುತ್ತಿದ್ದರು. ಇದರಿಂದಾಗಿ ಮೊದಲು ಯಾರ ಬಳಿಯೂ ಆಕೆ ಬಾಯ್ಬಿಟ್ಟಿರಲಿಲ್ಲ. ಆದರೆ ಬೆದರಿಕೆ ಹಾಕಿ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರಿಂದ ಕಾಟ ತಾಳಲಾರದೇ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಪೈಕಿ ಇಬ್ಬರು ಅಪ್ರಾಪ್ತರು ಸೇರಿದಂತೆ 23 ಆರೋಪಿಗಳನ್ನು ಬಂಧಿಸಲಾಗಿದೆ.