Select Your Language

Notifications

webdunia
webdunia
webdunia
webdunia

ಕಚ್ಚಾತೈಲದ ಹಡಗಿನಲ್ಲಿ 21 ಪಾಕ್‌ ಸಿಬ್ಬಂದಿ, ಪಾರಾದೀಪ್‌ ಬಂದರಿನಲ್ಲಿ ಹೈಅಲರ್ಟ್‌

ಪಾಕಿಸ್ತಾನಿ ಸಿಬ್ಬಂದಿ ಸದಸ್ಯರು

Sampriya

ಬೆಂಗಳೂರು , ಬುಧವಾರ, 14 ಮೇ 2025 (12:54 IST)
Photo Credit X
ಪಾರಾದೀಪ್‌ಗೆ ಬಂದಿದ್ದ ಹಡಗಿನಲ್ಲಿ 21 ಪಾಕಿಸ್ತಾನಿಗಳು ಪತ್ತೆಯಾದ ಬೆನ್ನಲ್ಲೇ  ಪಟ್ಟಣ ಪಾರಾದಿಪ್‌ನಲ್ಲಿ ಭದ್ರತೆಯನ್ನು ಪೊಲೀಸರು ಹೆಚ್ಚಿಸಿದ್ದಾರೆ.

ಒಟ್ಟು 25 ಸಿಬ್ಬಂದಿಗಳೊಂದಿಗೆ ಬುಧವಾರ (ಮೇ 14, 2025) ದಕ್ಷಿಣ ಕೊರಿಯಾದಿಂದ ಸಿಂಗಾಪುರದ ಮೂಲಕ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ ಕಚ್ಚಾ ತೈಲವನ್ನು ಹೊತ್ತುಕೊಂಡು ಪಾರಾದೀಪ್ ಬಂದರನ್ನು ತಲುಪಿದೆ ಎಂದು ಅವರು ಹೇಳಿದರು.

ವಲಸೆ ಇಲಾಖೆಯಿಂದ ಸಿಬ್ಬಂದಿಯ ಬಗ್ಗೆ ಮಾಹಿತಿ ಪಡೆದ ನಂತರ ಒಡಿಶಾ ಮೆರೈನ್ ಪೋಲಿಸ್ ಮತ್ತು ಸಿಐಎಸ್‌ಎಫ್‌ನಿಂದ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ ಎಂದು ಮೆರೈನ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಬಿತಾ ಡೆಹುರಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ಹಿನ್ನೆಲೆಯಲ್ಲಿ ಪಾರಾದೀಪ್ ಬಂದರಿನಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. "ಹಡಗನ್ನು ದಡದಿಂದ 20 ಕಿಮೀ ದೂರದಲ್ಲಿರುವ 'ಪಿಎಂ ಬರ್ತ್' ನಲ್ಲಿ ಲಂಗರು ಹಾಕಲಾಗಿದೆ ಮತ್ತು 11,350 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊಂದಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಕಚ್ಚಾ ತೈಲವನ್ನು ಸ್ಥಳಾಂತರಿಸುವ ಸಮಯದಲ್ಲಿ ಯಾವುದೇ ಸಿಬ್ಬಂದಿಯನ್ನು ಹಡಗಿನಿಂದ ಹೊರಹೋಗಲು ಅನುಮತಿಸಲಾಗುವುದಿಲ್ಲ" ಎಂದು ಪೊಲೀಸ್ ಅಧಿಕಾರಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

DK Shivkumar: ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಡಿಸಿಎಂ ಡಿಕೆ ಶಿವಕುಮಾರ್‌ ಕೊಟ್ಟ ಸ್ಟ್ರಾಂಗ್ ಕಾರಣ ಹೀಗಿದೆ