Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸರ್ಕಾರ ಆಡಳಿತದಲ್ಲಿ 2,132 ಉಗ್ರ ದಾಳಿ !

ಸರ್ಕಾರ ಆಡಳಿತದಲ್ಲಿ 2,132 ಉಗ್ರ ದಾಳಿ !
ನವದೆಹಲಿ , ಗುರುವಾರ, 20 ಅಕ್ಟೋಬರ್ 2022 (13:06 IST)
ನವದೆಹಲಿ : ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಯೋತ್ಪಾದಕ ದಾಳಿಗಳ ಸಂಖ್ಯೆ ಇಳಿಕೆಯಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಅತಿಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ. ಆದರೆ ಇಂದಿನ ಬಿಜೆಪಿ  ಸರ್ಕಾರದ ಅವಧಿಯಲ್ಲಿ ಅತಿಹೆಚ್ಚು ಉಗ್ರರನ್ನು ಬಂಧಿಸಲಾಗಿದೆ. ಮೋದಿ ಅವಧಿಯಲ್ಲಿ 2,132 ಉಗ್ರ ದಾಳಿಗಳು ನಡೆದಿದ್ದು, 1,538 ಉಗ್ರರನ್ನು ಕೊಲ್ಲಲಾಗಿದೆ.

ಕಳೆದ 18.5 ವರ್ಷದ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಒಟ್ಟು 11,453 ಭಯೋತ್ಪಾದಕ ದಾಳಿ ನಡೆದಿದ್ದು, 5,543 ಉಗ್ರರನ್ನು ಹತ್ಯೆಗೈದು 2,310 ಉಗ್ರರನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕೇಂದ್ರ ಗೃಹ ಸಚಿವಾಲಯದ ಜಮ್ಮು-ಕಾಶ್ಮೀರ ವಿಭಾಗವು ನೀಡಿದ ಉತ್ತರದಲ್ಲಿ ಈ ಅಂಕಿ-ಅಂಶಗಳಿವೆ.

ಅದರ ಪ್ರಕಾರ, 2004ರಿಂದ 2013ರ ಯುಪಿಎ ಅವಧಿಯ 10 ವರ್ಷದ ಆಳ್ವಿಕೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ 9,321 ಭಯೋತ್ಪಾದಕ ದಾಳಿ ನಡೆದಿವೆ. ಆ ವೇಳೆ 4,005 ಉಗ್ರರನ್ನು ಕೊಂದು, 878 ಉಗ್ರರನ್ನು ಬಂಧಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಾಲಯ : ಭಕ್ತರಿಂದ ಕೋಟ್ಯಂತರ ಕಾಣಿಕೆ ಸಂಗ್ರಹ?