Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಂಗ್ರೆಸ್ ನಾಯಕಿ ಮನೆಯಲ್ಲಿ ಸಾಮೂಹಿಕ ಅತ್ಯಾಚಾರ

ಕಾಂಗ್ರೆಸ್ ನಾಯಕಿ ಮನೆಯಲ್ಲಿ ಸಾಮೂಹಿಕ ಅತ್ಯಾಚಾರ
ಲೂಧಿಯಾನಾ , ಶನಿವಾರ, 29 ಅಕ್ಟೋಬರ್ 2016 (11:07 IST)

ಲೂಧಿಯಾನಾ: ಕಬಡ್ಡಿ ಆಟಗಾರ್ತಿ ಮೇಲಿನ ಸಾಮೂಹಿತ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾಂಗ್ರೆಸ್ ನಾಯಕಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
 


 

ಪಂಜಾಬ್ ನ ಖನ್ನಾದ ಮಹಿಳಾ ಕಾಂಗ್ರೆಸ್ ಘಟಕದ ನಾಯಕಿ ಶಹಾಂಜ್ ಹಾಗೂ ಅವತಾರ್ ಸಿಂಗ್ ಮತ್ತು ಆತನ ಗೆಳೆಯ ನಿರ್ಮಲ ಸಿಂಗ್ ಅವರೇ ಬಂಧಿತ ಆರೋಪಿಗಳು. ಕಳೆದ ಬುಧವಾರ ಕಾಂಗ್ರೆಸ್ ನಾಯಕಿ ಚಂಡಿಗಡ್ ದಲ್ಲಿ ದ್ವೀತಿಯ ಪಿಯುಸಿ ಓದುತ್ತಿರುವ 19 ವರ್ಷದ ಸ್ಥಳೀಯ ಮಟ್ಟದ ಕಬಡ್ಡಿ ಆಟಗಾರ್ತಿಯನ್ನು ಮನೆಗೆ ಕರೆಸಿಕೊಂಡಿದ್ದಳು. ಸಂದರ್ಭದಲ್ಲಿ ಆಟಗಾರ್ತಿ ಮೇಲೆ ಅವತಾರ್ ಸಿಂಗ್ ಮತ್ತು ಆತನ ಗೆಳೆಯ ನಿರ್ಮಲ್ ಸಿಂಗ್ ಎಂಬುವರು ಅತ್ಯಾಚಾರ ನಡೆಸಿದ್ದರು. ಸಂಬಂಧಿಸಿ ಕಬಡ್ಡಿ ಆಟಗಾರ್ತಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

 

ದೂರಿನಲ್ಲಿ ಅವತಾರ್ ಎಂಬುವರೊಂದಿಗೆ ಒಂದೂವರೆ ವರ್ಷದ ಹಿಂದೆ ಆಕೆಗೆ ಪರಿಚಯವಾಗಿತ್ತು. ಪರಿಚಯದ ಬಳಿಕ ಇಬ್ಬರೂ ಫೋನ್ ನಲ್ಲಿ ಮಾತನಾಡುತ್ತಿದ್ದರು‌. ಬುಧವಾರ ಕರೆ ಮಾಡಿ ಅವತಾರ್ ಆಕೆಯನ್ನು ತಮ್ಮ ಪೋಷಕರಿಗೆ ಪರಿಚಯಿಸುವುದಾಗಿ ಹೇಳಿ ಕರೆಸಿಕೊಂಡಿದ್ದಾನೆ. ಪೋಷಕರ ಭೇಟಿ ನಂತರ ಸಹೋದರಿಯನ್ನು ಭೇಟಿ ಮಾಡಿಸುವುದಾಗಿ ಹೇಳಿ, ಕಾಂಗ್ರೆಸ್ ನಾಯಕಿ ಶಹಾಂಜ್ ಮನೆಗೆ ಕರೆದೊಯ್ದಿದ್ದಾನೆ. ಸಂದರ್ಭದಲ್ಲಿ ಅವತಾರ್ ಸಿಂಗ್ ಹಾಗೂ ನಿರ್ಮಲ್ ಸಿಂಗ್ ಆಕೆಯ ಮೇಲೆ ಅತ್ಯಾಚಾರ ಮಾಡಿರುವುದಾಗಿ ದೂರಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ನಾಮಪತ್ರಕ್ಕೆ ಹೆಬ್ಬಟ್ಟಿನ ಸಹಿ ಹಾಕಿದ ಸಿಎಂ ಜಯಲಲಿತಾ