ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ವರದಿಗಳ ಮಧ್ಯೆ, ತಿರುಪರಗುಂಡ್ರಂ ಉಪಚುನಾವಣೆಯ ಎಐಎಡಿಎಂಕೆ ಅಭ್ಯರ್ಥಿಯಾದ ಎ.ಕೆ.ಭೋಸ್ ಅವರ ಚುನಾವಣಾ ನಾಮಪತ್ರಕ್ಕೆ ಸಹಿ ಹಾಕದೆ ಹೆಬ್ಬೆಟ್ಟು ಹಾಕಿರುವುದು ಆಘಾತ ಮೂಡಿಸಿದೆ.
ಫಾರಂ ಎ ಮತ್ತು ಫಾರಂ ಬಿ ಪಕ್ಷದ ಅಭ್ಯರ್ಥಿಯನ್ನು ಧೃಡಿಕರಣಗೊಳಿಸಲು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಜಯಲಲಿತಾ ಎಡಗೈ ಹೆಬ್ಬೆಟ್ಟು ಒತ್ತಿರುವುದು ಬೆಳಕಿಗೆ ಬಂದಿದೆ.
ಜಯಲಲಿತಾ ಸಹಿ ಮಾಡುವ ಸ್ಥಿತಿಯಲ್ಲಿಲ್ಲವಾದ್ದರಿಂದ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ