Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ಮಾರ್ಟ್ ಫೋನ್ ಕೊಡಿಸಲಿಲ್ಲವೆಂದು ಬಾಲಕ ಆತ್ಮಹತ್ಯೆ

ಸ್ಮಾರ್ಟ್ ಫೋನ್ ಕೊಡಿಸಲಿಲ್ಲವೆಂದು ಬಾಲಕ ಆತ್ಮಹತ್ಯೆ
ಕರೀಮ್ ನಗರ , ಗುರುವಾರ, 19 ಜನವರಿ 2017 (10:40 IST)
ಪೋಷಕರು ಸ್ಮಾರ್ಟ್ ಫೋನ್ ಕೊಡಿಸಲಿಲ್ಲವೆಂಬ ಕೋಪಕ್ಕೆ 14 ವರ್ಷದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ತೆಲಂಗಾಣದ ಜಗ್ತಿಯಾಲ ಜಿಲ್ಲೆಯಲ್ಲಿ ನಡೆದಿದೆ.
ಕರೀಮ್‌‌ನಗರದಿಂದ 40 ಕಿ.ಮೀ. ದೂರದಲ್ಲಿರುವ ರೈಕಲ್‌ ಮಂಡಲ್ ಹೆಡ್‌ಕ್ವಾಟರ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು 9ನೇ ತರಗತಿ ಓದುತ್ತಿದ್ದ ರೈಕಲ್ ಗ್ರಾಮದ ಪಿತ್ಲಾ ಲಿಂಗಮೂರ್ತಿ ಎಂದು ಗುರುತಿಸಲಾಗಿದೆ. 
 
ಮಂಗಳವಾರ ರಾತ್ರಿ ಬಾಲಕ ತನಗೆ ಸ್ಮಾರ್ಟ್ ಫೋನ್ ಬೇಕೆಂದು ಪೋಷಕರಲ್ಲಿ ಕೇಳಿದ್ದಾನೆ. ಆದರೆ ಫೋಷಕರು ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಬಾಲಕು ತಾನು ಸಾಯುವುದಾಗಿ ಹೇಳಿ ಮನೆಯಿಂದ ಹೊರ ನಡೆದಿದ್ದಾನೆ. ಆದರೆ ಆತನನ್ನು ಮಾತನ್ನು ಪೋಷಕರು ಗಂಭೀರವಾಗಿ ತೆಗೆದುಕೊಂಡಿಲ್ಲ. 
 
ಆದರೆ ಮನೆಯಿಂದ ಹೊರಗೆ ಹೋಗಿದ್ದ ಮಗ ಎಷ್ಟು ಹೊತ್ತಾದರೂ ಮರಳದಿದ್ದಾಗ ಆತನಿಗಾಗಿ ಶೋಧ ನಡೆಸಲಾಗಿದೆ. ಆದರೆ ಮರುದಿನ ಮುಂಜಾನೆ ಆತನ ದೇಹ ಶಾಲೆಯ ಕಟ್ಟಡದ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. 
 
ಬಾಲಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪೋಷಕರಿಗೆ ನೀಡಲಾಗಿದೆ. 
 
ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಲಿಕಾಂ ಕ್ಷೇತ್ರದಲ್ಲಿ 20 ಲಕ್ಷ ಉದ್ಯೋಗವಕಾಶ!